ವಿಶೇಷ ಸೂಚನೆ

ವಿ.ಕೃ.ಗೋಕಾಕ್

ಡಾ||ವಿನಾಯಕ ಕೃಷ್ಣ ಗೋಕಾಕ ಅವರು ಕನ್ನಡ ಸಾಹಿತ್ಯದ ಕ್ಷೇತ್ರದಲ್ಲಿ ಎತ್ತರದ ಲೇಖಕ. ಧಾರವಾಡ ಜಿಲ್ಲೆಯ ಸವಣೂರಿನಲ್ಲಿ ೧೦/೦೮/೧೯೦೬ರಲ್ಲಿ ಜನನ. ಸವಣೂರು, ಧಾರವಾಡಗಳಲ್ಲಿ ವಿದ್ಯಾಭ್ಯಾಸ. ಇಂಗ್ಲೀಷ್ ವಿಷಯದಲ್ಲಿ ಎಂ.ಎ. ಪರೀಕ್ಷೆಯಲ್ಲಿ ಮೊದಲ ದರ್ಜೆಯಲ್ಲಿ ತೇರ್ಗಡೆ. ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಆಯ್ಕೆಯಾದರು. ಅದೇ ಕಾಲೇಜಿನವರು ಅವರನ್ನು ಉನ್ನತ ವ್ಯಾಸಂಗಕ್ಕಾಗಿ ಕಳುಹಿಸಿದರು. ಇಲ್ಲಿಂದ ಸಾಹಿತ್ಯದಲ್ಲಿ ಮೊದಲ ದರ್ಜೆಯಲ್ಲಿ ಉತ್ತೀರ್ಣರಾದ ಪ್ರಥಮ ಭಾರತೀಯರಾದರು.
ವಿನಾಯಕ ಕಾವ್ಯನಾಮದಲ್ಲಿ ಕಾವ್ಯ ರಚನೆ. ಹೊಸ ರೀತಿಯ ಕಾವ್ಯರಚನೆ ನೂರು ಮುಖ ಗೋಕಾಕರಲ್ಲಿ. ಸಮುದ್ರ ಗೀತ ರಚನೆ, ಪೌರಾತ್ಯ, ಪಾಶ್ಚಾತ್ಯಗಳ ಸಮ್ಮಿಲನ ಅವರ ಖಂಡಕಾವ್ಯ ದ್ಯಾವಾ ಪ್ರಥಿವಿಯಲ್ಲಿ. ಗೋಕಾಕರ ’ಸಮರಸವೇ ಜೀವನ' ಸಾವಿರದ ಮುನ್ನೂರು ಪುಟಗಳಿಗೂ ಮೀರಿದ ಬೃಹತ್ ಕಾದಂಬರಿ.

ಅವರ ಮಹಾಕಾವ್ಯ "ಭಾರತ ಸಿಂಧುರಶ್ಮಿ"ಗೆ ಜ್ಞಾನಪೀಠ ಪ್ರಶಸ್ತಿ. ಪ್ರಪಂಚ ಪರ್ಯಟನದಿಂದ ಗಳಿಸಿದ ಅನುಭವ ಹಾಗೂ ಪಾಶ್ಚಾತ್ಯ ಸಾಹಿತ್ಯದ ಆಳವಾದ, ವಿಸ್ತಾರವಾದ, ಅಧ್ಯಯನದಿಂದ ಹೊರಬಂದದ್ದು ವಿನಾಯಕರ ಕವನ, ನಾಟಕ, ಪ್ರಬಂಧ, ಕಾದಂಬರಿ, ಪ್ರವಾಸಕಥನಗಳು.

ಅವರು ಅಲಂಕರಿಸಿದ ಹುದ್ದೆಗಳು ಅನೇಕ. ಪುಣೆ, ಸಾಂಗಲಿ, ಮೀರಜಿನ ಕಾಲೇಜುಗಳಲ್ಲಿ ಪ್ರಧ್ಯಾಪಕರು. ಉಸ್ಮಾನಿಯ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕ. ಬರೋಡಾದ ಒಂದು ನಗರದಲ್ಲಿ ಆರಂಭವಾದ ಒಂದು ಕಾಲೇಜಿನಲ್ಲಿ ಪ್ರಾಚಾರ್ಯ. ಅನಂತರ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪ್ರಾಚಾರ್ಯ ಹುದ್ದೆ. ಬೆಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ. ಸತ್ಯಸಾಯಿ ಸಂಸ್ಥೆಯ ಉಪಕುಲಪತಿ.

ಜಪಾನ್, ಅಮೇರಿಕಾ, ಇಂಗ್ಲೆಂಡ್, ಬೆಲ್ಜಿಯಂ, ಗ್ರೀಸ್ ದೇಶಗಳಿಗೆ ಸಾಂಸ್ಕತಿಕ ರಾಯಭಾರಿಯಾಗಿ ಭೇಟಿ. ಅವರಿಗೆ ಸಂದ ಗೌರವಗಳು ಅನೇಕ. ೧೯೫೮ರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ೧೯೬೦ ರಲ್ಲಿ ಪದ್ಮಶ್ರೀ, ೧೯೬೦ ದ್ಯಾವಾ ಪ್ರಥಿವಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ೧೯೬೭ ರಲ್ಲಿ ಕರ್ನಾಟಕದ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್, ೧೯೭೦ ಕ್ಯಾಲಿಫೋರ್ನಿಯಾದ ಪೆಸಿಫಿಕ್ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್, ೧೯೯೧ ರಲ್ಲಿ ಜ್ಞಾನಪೀ� ಪ್ರಶಸ್ತಿ ಪುರಸ್ಕತರು.

ಕನ್ನಡದ ಚಳುವಳಿಗಳಲ್ಲಿ "ಗೋಕಾಕ್ ಚಳುವಳಿ" ಅಗ್ರಸ್ಥಾನ. ಶಿಕ್ಷಣದಲ್ಲಿ ಮಾತೃಭಾಷೆಯ ಹಾಗೂ ಕನ್ನಡದ ಸ್ಥಾನ ಏನಿರಬೇಕೆಂದು ಶಾಸ್ತ್ರೀಯವಾಗಿ ಅಧ್ಯಯನ ಮಾಡಿ ವರದಿ ಸಲ್ಲಿಸಿದವರು. ಕನ್ನಡ, ಇಂಗ್ಲೀಷ್, ಸಂಸ್ಕತ ಭಾಷೆಯ ಮಹಾನ್ ವಿದ್ವಾಂಸ. ಮೇರು ವ್ಯಕ್ತಿತ್ವ, ಅಸೀಮ ವಾಙ್ಮಯ ಹಾಗೂ ಮೋಹಕ ಕಂ� ದ ಗೋಕಾಕರ ಕಾಣಿಕೆ ಕನ್ನಡಿಗರಿಗೆ ಗೋಕಾಕ್ ವರದಿ.