ವಿಶೇಷ ಸೂಚನೆ

ಬಯಲು ರಂಗಮಂದಿರ

ಬಯಲು ರಂಗಮಂದಿರ

ಬಯಲು ರಂಗಮಂದಿರಗಳು:ಗ್ರಾಮೀಣ ಪ್ರದೇಶದಲ್ಲಿ ಸಾಂಸ್ಕತಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ ಒಂದೊಂದು ಬಯಲು ರಂಗಮಂದಿರವನ್ನು ನಿರ್ಮಿಸುವ ಯೋಜನೆ. ಮಂಡಲ ಮಟ್ಟದಲ್ಲಿ ನಿಮರ್ಾಣ ಮಾಡುವ ಸಂಸ್ಥೆಗಳಿಗೂ ಈ ನೆರವನ್ನು ವಿಸ್ತರಿಸಲಾಗುತ್ತಿದೆ.  

ಸಾಂಸ್ಕøತಿಕವಾಗಿ ಸಾಹಿತ್ಯಿಕವಾಗಿ ನಿರಂತರವಾಗಿ ಚಟುವಟಿಕೆಗಳನ್ನು ನಡೆಸಿಕೊಂಡು ಬರುವಂತಹ ಶುದ್ಧ ಸಾಹಿತ್ಯ ಸಾಂಸ್ಕøತಿಕ ನೋಂದಾಯಿತ ಸಂಘ-ಸಂಸ್ಥೆಗಳಿಗೆ ನಿಯಮಾನುಸಾರ ಗ್ರಾಮ ಹಾಗೂ ಹೋಬಳಿ ಮಟ್ಟಗಳಲ್ಲಿ ಬಯಲು ರಂಗಮಂದಿರ ನಿರ್ಮಾಣದ ಯೋಜನೆ ಜಾರಿಯಲ್ಲಿದೆ.

• ವೃತ್ತಿ ನಾಟಕ ಕಂಪನಿಗಳಿಗೆ ಅನುದಾನ

• ವೃತ್ತಿಯಲ್ಲಿ ರಂಗಭೂಮಿಯನ್ನೇ ಅವಲಂಭಿಸಿ ರಂಗಭೂಮಿಯ ಮೂಲಕ ಕನ್ನಡ ನಾಡು, ನುಡಿ, ಸಂಸ್ಕøತಿಗೆ ಗಣನೀಯ ಕೊಡುಗೆಯನ್ನು ಸಲ್ಲಿಸುತ್ತಿರುವಂತಹ ರಂಗಭೂಮಿ ನಿರತ ನಾಟಕ ಕಂಪನಿಗಳಿಗೆ ಧನಸಹಾಯ ನೀಡುವುದು.

• ವೃತ್ತಿರಂಗ ಭೂಮಿ ಕಾಯಕಲ್ಪ ಯೋಜನೆಯಡಿ ಅನುದಾನ ಕೋರಿ ಅರ್ಜಿ ಸಲ್ಲಿಸುವ ವೃತ್ತಿ ನಾಟಕ ಕಂಪನಿಗಳು ಜಿಲ್ಲಾ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ವರದಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು

1. ಪ್ರತಿ ವರ್ಷ ಏಪ್ರಿಲ್‍ನಿಂದ ಮಾರ್ಚ್ ಅಂತ್ಯದವರೆಗೆ ಕನಿಷ್ಠ 200ದಿನಗಳು ಪ್ರತಿದಿನ 2ಪ್ರದರ್ಶನಗಳಂತೆ ನಿರಂತರವಾಗಿ ನಾಟಕ ನಡೆದಿರಬೇಕು. ಅಗತ್ಯ ದಾಖಲೆ.

2. ನಾಟಕ ನಡೆದ ಬಗ್ಗೆ ಸ್ಥಳದ ಆರಕ್ಷಕ ವೃತ್ತ ನಿರೀಕ್ಷಕರಿಂದ ದೃಢೀಕರಿಸಿದ ಪ್ರಮಾಣ ಪತ್ರ.

3. ತಹಶೀಲ್ದಾರ್ ಅವರಿಂದ ಪಡೆದ ಲೈಸನ್ಸ್ ಪ್ರತಿ ದೃಢೀಕರಿಸಿ ಒದಗಿಸುವುದು.

4. ನಾಟಕ ನಡೆದ ಬಗ್ಗೆ ತಹಶೀಲ್ದಾರ್‍ರಿಂದ ಪಡೆದ ದೃಢೀಕರಣ ಪ್ರಮಾಣ ಪತ್ರ.

5. ನಾಟಕ ನಡೆದ ಸ್ಥಳದಲ್ಲಿ ಪಾವತಿಸಿದ ವಿದ್ಯುತ್ ದೃಢೀಕರಣ ಪ್ರಮಾಣ ಪತ್ರ.

6. ನಾಟಕಗಳಲ್ಲಿ ಭಾಗವಹಿಸಿದ ಕಲಾವಿದರು ಹಾಗೂ ತಂತ್ರಜ್ಞರ ಪಟ್ಟಿ ಅವರ ಸಹಿಯೊಂದಿಗೆ, ಮಾಲೀಕರು ದೃಢೀಕರಿಸಿ ಒದಗಿಸುವುದು.

7. ನಾಟಕ ಪ್ರದರ್ಶನಕ್ಕೆ ಸಿದ್ಧಪಡಿಸಿದ ಆಹ್ವಾನಪತ್ರಿಕೆ, ಕರಪತ್ರ (ಹ್ಯಾಂಡ್ ಬಿಲ್)ಗಳನ್ನು ಒದಗಿಸುವುದು.

8. ಪ್ರಚಾರಕ್ಕೆ ಬಳಸಿದ ಮೈಕ್ ಲೈಸನ್ಸ್ ಪ್ರತಿಯನ್ನು ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಿಸಿ ಒದಗಿಸುವುದು.

9. ಕಲಾವಿದರಿಗೆ ಪಾವತಿಸಿದ ಸಂಭಾವನೆಯ ದೃಢೀಕೃತ ವೇತನ ಬಟವಾಡಿಯ ಪಟ್ಟಿಯ ನಕಲು ಒದಗಿಸುವುದು.

10. ನಾಟಕ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕಲಾವಿದರು, ತಂತ್ರಜ್ಞರು, ಗೇಟ್ ಕೀಪರ್, ಮ್ಯಾನೇಜರ್ ಇವರುಗಳ ಮಾಹಿತಿಯನ್ನೊಳಗೊಂಡ ವಿವರ ಒದಗಿಸುವುದು. (ಕಂಪನಿಗೆ ಇಲಾಖೆ ಪ್ರತಿನಿಧಿಗಳು ಭೇಟಿ ನೀಡಿದಾಗ ಇವರುಗಳು ಸ್ಥಳದಲ್ಲಿ ಹಾಜರಿರಬೇಕು).

11. ಸಂಸ್ಥೆಯು ನಡೆಸಿದ ಆರ್ಥಿಕ ವ್ಯವಹಾರಗಳ ಕುರಿತು ಲೆಕ್ಕಪರಿಶೋಧಕರಿಂದ ಪಡೆದ ಲೆಕ್ಕಪಟ್ಟಿ ಹಣಬಳಕೆ ಪ್ರಮಾಣ ಪತ್ರ ಒದಗಿಸುವುದು.