ವಿಶೇಷ ಸೂಚನೆ

ಡಾ|| ಪುಟ್ಟರಾಜ ಗವಾಯಿಗಳು

ಉಭಯಗಾನ ವಿಶಾರದ, ತ್ರಿಭಾಷಾ ಪಂಡಿತ, ವಾದ್ಯಗಾರ, ವಾಗ್ಗೇಯಕಾರ, ನಾಟಕ ಕರ್ತೃ ಹೀಗೆ ಹಲವು ವಿಶೇಷಣಗಳ ಒಡೆಯ ಡಾ||ಪುಟ್ಟರಾಜ ಗವಾಯಿಗಳು ಜನಿಸಿದ್ದು ಮಾರ್ಚ್ ೩,೧೯೧೪ರಂದು ಧಾರವಾಡ ಜಿಲ್ಲೆಯ ಹಾವೇರಿ ತಾಲೂಕಿನ ದೇವಗಿರಿ ಎಂಬ ಊರಲ್ಲಿ. ತಂದೆ ರೇವಣ್ಣಯ್ಯ, ತಾಯಿ ಸಿದ್ದಮ್ಮ. ಪುಟ್ಟಯ್ಯ ಆರು ತಿಂಗಳ ಮಗುವಿದ್ದಾಗಲೇ ಕಣ್ಣು ಕಳೆದುಕೊಂಡರು. ಸಾಲದೆಂಬಂತೆ ಹೆತ್ತವರನ್ನೂ ಕಳೆದುಕೊಂಡರು. ಆಗ ಈ ಅನಾಥ ಅಂಧ ಮಗುವಿನ ಪಾಲನೆಯ ಭಾಗವಹಿಸಿಕೊಂಡವರು ಸೋದರಮಾವ ಚಂದ್ರಶೇಖರಯ್ಯ. ಬಾಲಕ ಪುಟ್ಟಯ್ಯನಿಗೆ ಪ್ರಾಥಮಿಕ ಶಿಕ್ಷಣ ಹಾಗೂ ಸಂಗೀತದಲ್ಲಿ ಇವರೇ ಪ್ರಥಮಗುರು. ಕಂ� ಮಾಧುರ್ಯ ಹಾಗೂ ಹಾರ್ಮೋನಿಯಂ ವಾದನದಲ್ಲಿನ ಪುಟ್ಟಯ್ಯನವರ ಪ್ರತಿಭೆಗೆ ಬೆರಗಾಗಿ,ಈ ಬಾಲಕನನ್ನು ಓರ್ವ ಶ್ರೇಷ್� ಸಂಗೀತಗಾರರನ್ನಾಗಿಸಿಬೇಕೆಂದು ಸಂಕಲ್ಪತೊಟ್ಟು, ಚಂದ್ರಶೇಖರಯ್ಯನವರು ಪುಟ್ಟಯ್ಯನವರನ್ನು ಪಂಚಾಕ್ಷರಿ ಗವಾಯಿಗಳಿಗೆ ಒಪ್ಪಿಸಿದರು.

ಬಾಲಕ ಪುಟ್ಟಯ್ಯನವರ ಅಗಾಧ ಸತ್ವ, ಆದರ್ಶ, ಜಿಗಟುತನ, ಕಲ್ಪನಾಶಕ್ತಿಗಳಿಂದ ಪ್ರಭಾವಿತರಾಗಿ ಪಂಚಾಕ್ಷರಿ ಗವಾಯಿಗಳು ಶಿಷ್ಯನಿಗೆ ಸಂಗೀತದ ಜ್ಞಾನಧಾರೆ ನೀಡುವುದರ ಜೊತೆಗೆ ಕನ್ನಡ, ಹಿಂದಿ ಮತ್ತು ಸಂಸ್ಕೃತ ಸಾಹಿತ್ಯವನ್ನು ಕಲಿಸುವ ಏರ್ಪಾಟು ಮಾಡಿದರು. ರೋಣದ ಪುಟ್ಟದೇವರು, ನಂದೀಗವಾಡ ಮ� ದ ರಾಜಶೇಖರ ಶಾಸ್ತ್ರಿಗಳು ಹಾಗೂ ಜರಟಗಿಯ ಸದಾಶಿವ ಶಾಸ್ತ್ರಿಗಳಿಂದ ಪುಟ್ಟಯ್ಯ ಸಂಸ್ಕತ ಕಲಿತರು. ಮುಂದೆ ಪಗಡಿದಿನ್ನಿ ಚಂದ್ರಶೇಖರ ಶಾಸ್ತ್ರಿಗಳಿಂದ ಕನ್ನಡ ಭಾಷೆಯ ವ್ಯಾಕರಣ, ಅಲಂಕಾರಶಾಸ್ತ್ರ ಮುಂತಾದವುಗಳನ್ನು ಕಲಿತರು. ಜೊತೆಗೆ ಹಿಂದಿ ಭಾಷೆಯನ್ನೂ ಸಹ ’ಹಿಂದಿ ರಾಷ್ಟ್ರಭಾಷೆ' ಪ� ್ಯಕ್ರಮದವರೆಗೆ ಕಲಿತು, ಈ ಮೂರುಭಾಷೆಗಳಲ್ಲೂ 'ಬ್ಲೈಲ್ ಲಿಪಿಯ' ಮೂಲಕ ಸಾಹಿತ್ಯರಚನೆ ಮಾಡಿದ್ದಾರೆ.

ಅನೇಕ ವರ್ಷಗಳ ಕಾಲ ಗುರುಗಳ ಸನ್ನಿಧಿಯಲ್ಲಿ ಸಂಗೀತ ಸಾಧನೆ ಮಾಡಿದ ಪುಟ್ಟರಾಜ ಗವಾಯಿಗಳು ಕರ್ನಾಟಕ ಹಾಗೂ ಹಿಂದೂಸ್ತಾನಿ ಸಂಗೀತಗಳಲ್ಲಿ ಸಿದ್ದಿಪಡೆದು, ನಾಡಿನ ಹಲವೆಡೆ ಗುರು - ಶಿಷ್ಯರ ಜೋಡಿ ನೀಡಿರುವ ಅನೇಕ ಕಾರ್ಯಕ್ರಮಗಳು ಜನಪ್ರಿಯವಾಗಿವೆ. ಅಷ್ಟೇ ಅಲ್ಲದೇ, ಹಾರ್ಮೋನಿಯಂ, ತಬಲಾ, ಪಿಟೀಲು, ಸಾರಂಗ, ವೀಣೆ ಮೊದಲಾದ ವಾದ್ಯಗಳನ್ನು ನುಡಿಸುವುದರಲ್ಲೂ ಇವರು ಪ್ರವೀಣರು.

ಹೀಗೆ ಸಾಹಿತ್ಯ ಮತ್ತು ಸಂಗೀತದ ಜೊತೆಗೆ ನಾಟಕಗಳನ್ನು ರಚಿಸುವುದು. ಪ್ರದರ್ಶಿಸುವುದು ಕೂಡ ಅವರ ಹವ್ಯಾಸ. ’ಶ್ರೀ ಕುಮಾರೇಶ್ವರ ಕೃಪಾಪೋಷಿತ' ನಾಟಕ ಮಂಡಳಿಯನ್ನು ಸ್ಥಾಪಿಸಿ, ’ಶ್ರೀ ವೀರೇಶ್ವರ ಪುಣ್ಯಾಶ್ರಮ'ದ ವಿದ್ಯಾರ್ಥಿಗಳಿಂದಲೇ ಅನೇಕ ನಾಟಕಗಳನ್ನು ಪ್ರದರ್ಶಿಸಿದ್ದಾರೆ.

ಪುಟ್ಟರಾಜ ಗವಾಯಿಗಳ ಸಾಧನೆ - ಸಿದ್ದಿಗಳಿಗೆ ಸಂದ ಗೌರವ - ಪ್ರಶಸ್ತಿಗಳು ಅನೇಕ. ಅದರಲ್ಲಿ ತ್ರಿಭಾಷಾ ಕಲಿ, ಉಭಯ ಗಾಯನಚಾರ್ಯ, ಸಾಹಿತ್ಯ ಸಂಗೀತ ಪ್ರವೀಣ, ಸಂಗೀತರತ್ನ, ಶ್ರೀ ಕನಕ - ಪುರಂದರ ಪ್ರಶಸ್ತಿ, ಕನರ್ಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ ಮುಂತಾದವು ಪ್ರಮುಖವಾದವು. ತಮ್ಮ ಗುರುಗಳ ಆಜ್ಞೆಯಂತೆ ಪುಣ್ಯಾಶ್ರಮದ ಜವಾಬ್ದಾರಿ ವಹಿಸಿಕೊಂಡು, ನೂರಾರು ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ ಕೊಟ್ಟು ಸಂಗೀತ, ಶಿಕ್ಷಣ ನೀಡುವ ಕಾಯಕದಲ್ಲಿ ಪುಟ್ಟರಾಜ ಗವಾಯಿಗಳು ನಿರತರಾಗಿದ್ದಾರೆ.