ವಿಶೇಷ ಸೂಚನೆ

ಕಲಾವಿದರಿಗೆ ಸಹಾಯ

ನಾಡಿನ ಕಲೆ, ಸಾಹಿತ್ಯ, ಸಂಸ್ಕøತಿಯ ಅಭಿವೃದ್ಧಿಗಾಗಿ ಸೇವೆಸಲ್ಲಿಸಿ ಕಷ್ಟ ಪರಿಸ್ಥಿತಿಯಲ್ಲಿರುವ ಸಾಹಿತಿ/ಕಲಾವಿದರಿಗೆ ಮಾಸಿಕ ರೂ: 1,500/-ಗಳ ಮಾಸಾಶನ ಮಂಜೂರು ಮಾಡಲಾಗುತ್ತಿದೆ.

ಮಾಸಾಶನ ಮಂಜೂರಾತಿಗೆ ಸಲ್ಲಿಸಬೇಕಾದ ದಾಖಲೆಗಳ ವಿವರ

1. ನಿಗದಿತ ಮಾಸಾಶನ ಅರ್ಜಿಯನ್ನು ಆಯಾಯ ಜಿಲ್ಲಾ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಇವರ ಮೂಲಕ ಸಲ್ಲಿಸಬೇಕು.

2. ಸಾಹಿತ್ಯ, ಸಂಗೀತ, ನೃತ್ಯ, ನಾಟಕ, ಜಾನಪದ ಮತ್ತು ಯಕ್ಷಗಾನ, ಲಲಿತಕಲೆ, ಶಿಲ್ಪಕಲೆಗಳಲ್ಲಿ 25ವರ್ಷಗಳ ಕಾಲ ಗಣನೀಯ ಸೇವೆಸಲ್ಲಿಸಿ ಕಷ್ಟಪರಿಸ್ಥಿಯಲ್ಲಿರುವವರು ಮಾಸಾಶನ ಪಡೆಯಲು ಅರ್ಜಿ ಸಲ್ಲಿಸಬಹುದು.

3. ಅರ್ಜಿ ಸಲ್ಲಿಸಲು ಸಾಹಿತಿ ಕಲಾವಿದರ ವಯಸ್ಸು 58 ವರ್ಷಗಳಾಗಿರಬೇಕು. ವಯಸ್ಸಿನ ಬಗ್ಗೆ ಶಿಕ್ಷಣ ಸಂಸ್ಥೆ ನೀಡಿದ ಅಥವಾ ಕೋರ್ಟಿನಿಂದ ಪಡೆದ ಅಫಿಡವಿಟ್ ಅನ್ನು ಸಲ್ಲಿಸಬೇಕು.

4. ಕಲಾವಿದರು ತಹಶೀಲ್ದಾರ್‍ರಿಂದ ಪಡೆದ ವಾರ್ಷಿಕ ಆದಾಯ ಪ್ರಮಾಣ ಪತ್ರ ನೀಡಬೇಕು (ಗ್ರಾಮಾಂತರ ಪ್ರದೇಶಗಳಿಗೆ ರೂ.40.000-00 ಹಾಗೂ ಪಟ್ಟಣ ಪ್ರದೇಶಗಳಿಗೆ ರೂ.50,000-00 ಅಥವಾ ಅದಕ್ಕಿಂತ ಕಡಿಮೆ ವಾರ್ಷಿಕ ಆದಾಯ ಇರಬೇಕು).

5. ಅಂಗವಿಕಲ ಕಲಾವಿದರಿಗೆ ವಯಸ್ಸು 40ವರ್ಷಗಳಾಗಿದ್ದರೆ ಅಥವಾ 20 ವರ್ಷಗಳ ಸೇವೆ ಸಲ್ಲಿಸಿದ್ದರೆ, ಮಾಸಾಶನ ಮಂಜೂರಾತಿಗೆ ಅರ್ಜಿಯನ್ನು ಪರಿಗಣಿಸಲಾಗುವುದು ಇಂತಹ ಕಲಾವಿದರು ಅಂಗವಿಕಲತೆಯ ಬಗ್ಗೆ ವೈದ್ಯಕೀಯ ಅಧಿಕೃತ ದಾಖಲೆಗಳನ್ನು ಸಲ್ಲಿಸಬೇಕು.

6. ಅರ್ಜಿದಾರರು ಮೂರು ಬಣ್ಣಗಳುಳ್ಳ ತ್ರಿಪ್ರತಿಯ ಮಾಸಾಶನ ಅರ್ಜಿಯನ್ನು ಅವರ ಸಹಿ ಮತ್ತು ಸರಿಯಾದ ವಿಳಾಸದೊಂದಿಗೆ ಭರ್ತಿಮಾಡಿ ಅವಶ್ಯ ದಾಖಲೆಗಳೊಂದಿಗೆ, ಅವರ ಕಲಾಸೇವೆಯ ಸಾಧನೆಗಳ ಮೂಲ ಪ್ರಮಾಣ ಪತ್ರಗಳನ್ನು, ಇಲ್ಲವೇ ಗೆಜೆಟೆಡ್ ಅಧಿಕಾರಿಯಿಂದ ದೃಢೀಕರಿಸಲ್ಪಟ್ಟ ದಾಖಲೆಗಳನ್ನು ಆಯಾ ಜಿಲ್ಲೆಯ ಸಹಾಯಕ ನಿರ್ದೇಶಕರುಗಳಿಗೆ ಸಲ್ಲಿಸಬೇಕು. ಅರ್ಜಿಯೊಂದಿಗೆ ಇತ್ತಿಚಿನ ಎರಡು ಭಾವಚಿತ್ರಗಳನ್ನು ಲಗತ್ತಿಸಿರಬೇಕು. ಭಾವಚಿತ್ರಗಳಿಗೆ ಗೆಜೆಟೆಡ್ ಅಧಿಕಾರಿಯ ದೃಢೀಕರಣವಿರಬೇಕು.

7. ಅಪೂರ್ಣ ಮಾಹಿತಿ ಇರುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

8. ವೃದ್ಧಾಪ್ಯ ವೇತನ, ವಿಧವಾವೇತನ, ಅಂಗವಿಕಲರ ಮಾಸಾಶನ, ರಾಜ್ಯ ಅಥವಾ ಕೇಂದ್ರ ಸರ್ಕಾರದಿಂದ ಪಿಂಚಣಿ ಇತ್ಯಾದಿಗಳನ್ನು ಪಡೆಯುತ್ತಿದ್ದು, ನಿಗದಿತ ಮಾಸಾಶನ ಹಣವೂ ಸೇರಿದಂತೆ ಆದಾಯ ಮಿತಿಯನ್ನು ಮೀರಬಾರದು.

1. ಕಲಾವಿದರ ಗುರುತಿನ ಚೀಟಿ

ಸಂಸ್ಕೃತಿ ಇಲಾಖೆಯಿಂದ ಕಲಾವಿದರಿಗೆ ಗುರುತಿನ ಚೀಟಿ ನೀಡುವ ಯೋಜನೆ ಇದ್ದು ದೂರದರ್ಶನ, ಆಕಾಶವಾಣಿ ಹಾಗೂ ಪ್ರಶಸ್ತಿ ಪಡೆದ ಕಲಾವಿದರುಗಳಿಗೆ ಗುರುತಿನ ಚೀಟಿ ನೀಡಲಾಗುತ್ತದೆ. ಈ ಯೋಜನೆ ಅಡಿ ಕಲಾವಿದರು ಅಪೇಕ್ಷೆ ಪಟ್ಟಲ್ಲಿ ಅಂತಹ ಕಲಾವಿದರುಗಳಿಂದ ಮನವಿ ಪಡೆದು ಕಲಾವಿದರ ಗುತಿನ ಚೀಟಿ ನೀಡಲಾಗುತ್ತದೆ. 2013-14ನೇ ಸಾಲಿನಲ್ಲಿ 6 ಜನ ಕಲಾವಿದರುಗಳಿಗೆ ಗುರುತಿನ ಚೀಟಿ ನೀಡಲಾಗಿರುತ್ತದೆ.

ಕ್ರ.ಸಂ ಕಲಾವಿದರ ಹೆಸರು
01. ಶ್ರೀ ಫಕೀರಪ್ಪ ವರವಿ, ಬೆಂಗಳೂರು
02. ಶ್ರೀ ಎಸ್.ವಿ.ಭಾಸ್ಕರ್, ಬೆಂಗಳೂರು
03. ಶ್ರೀ ಪಿ.ಸುಧಾಕರ, ಬೆಂಗಳೂರು
04. ಶ್ರೀ ಬಿ.ಎ.ರಾಧಾ ಕೃಷ್ಣ, ಬೆಂಗಳೂರು
05. ಶ್ರೀ ಕೆ.ಎನ್.ನಾಗೇಶ್, ಬೆಂಗಳೂರು
06. ಶ್ರೀ ಸಿ.ರಾಮದಾಸ್, ಬೆಂಗಳೂರು