ವಿಶೇಷ ಸೂಚನೆ

ಸಾಂಸ್ಕೃತಿಕ ಕಾರ್ಯಕ್ರಮಗಳು

ಸಾಂಸ್ಕೃತಿಕ ಕಾರ್ಯಕ್ರಮಗಳು

ಕನ್ನಡ ಸಂಶ್ಕೃತಿ ಇಲಾಖೆಯು ಸದಾ ವಿನೂತನ ಹಾಗೂ ವಿಶಿಷ್ಟ ಮಾರ್ಗಗಗಳಲ್ಲಿ ಸಾಂಸ್ಕೃತಿಕ ಪ್ರತಿಭೆಗಳಿಗೆ ತಮ್ಮ ಕಲಾಪ್ರತಿಭೆಯನ್ನು ಬೆಳಗಲು ಅವಕಾಶ ಮಾಡಿಕೊಡುತ್ತಿದೆ. ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್ತಿನ ಸಹಯೋಗದಲ್ಲಿ ಕಳೆದ 32 ವರ್ಷಗಳಿಂದ ನಿರಂತರ ಪ್ರತಿ ಶುಕ್ರವಾರದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಎಳೆಯ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುವ “ಚಿಗುರು’ ಕಾರ್ಯಕ್ರಮ, ಯುವ ಪ್ರತಿಭಾವಂತ ಕಲಾವಿದರ ಪ್ರತಿಭಾ ಪ್ರದರ್ಶನಕ್ಕೆ “ಯುವ ಸೌರಭ’ ಯೋಜನೆಯ ಮೂಲಕ ಅವಕಾಶ, ಹೀಗೆ ನಿರಂತರವಾಗಿ ವಿವಿಧ ವಯೋಮಾನದ ಕಲಾಪ್ರತಿಭೆಗಳಿಗೆ ತಮ್ಮ ಕಲಾಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.