ವಿಶೇಷ ಸೂಚನೆ

ನಾಡು-ನುಡಿ

ವಿಜಯನಗರದ ಅರಸರು
13ನೆಯ ಶತಮಾನದಲ್ಲಿ ಭಾರತವು ಮುಸಲ್ಮಾನರ ದಾಳಿಯಿಂದ ತತ್ತರಿಸಿತು. ದಕ್ಷಿಣದ್ಲಲೂ ಕಾಕತೀಯರು, ಹೊಯ್ಸಳರು, ಸೇಉಣರು, ಕಂಪಿಲಿಯವರು, ಮಧುರೆಯವರು ಮುಸಲ್ಮಾನರ ದಾಳಿಗೆ ಗುರಿಯಾದರು. ಅವರ ದಾಳಿಯನ್ನು ಎದುರಿಸಲು ದಕ್ಷಿಣದ ರಾಜರೆಲ್ಲರೂ ಒಗ್ಗೂಡಿದರು. ಕ್ರಿ.ಶ. 1336ರಲ್ಲಿ ಸಂಗಮ ವಂಶದ ಹರಿಹರನು ವಿಜಯನಗರ ಸಾಮ್ರಾಜ್ಯವನ್ನು ಆಳತೊಡಗಿದ. ಅದೇ ಕಾಲಕ್ಕೆ ಗುಲಬರ್ಗದಲ್ಲಿ ಬಹಮನಿ ಸುಲ್ತಾನರ ಆಳ್ವಿಕೆಯೂ ಆರಂಭವಾಯಿತು. ತನ್ನ ಸಹೋದರರ ನೆರವಿನಿಂದ ಆಳತೊಡಗಿದ ಹರಿಹರನು ರಾಜ್ಯ ವಿಸ್ತರಣೆ ಮಾಡಿದ. ನಂತರ ಅವನ ತಮ್ಮ ಬುಕ್ಕರಾಯನ ಕಾಲದಲ್ಲೂ ರಾಜ್ಯ ವಿಸ್ತರಣೆ ಆಯಿತು. ಮಧುರೆಯ ಸುಲ್ತಾನರನ್ನೂ ಸೋಲಿಸಲಾಯಿತು. ಬುಕ್ಕನ ಮಗ ಇಮ್ಮಡಿ ಹರಿಹರನು ಚೋಳ ಮತ್ತು ಪಾಂಡ್ಯರ ದಂಗೆಗಳನ್ನು ಅಡಗಿಸಿ ಶ್ರೀಲಂಕಾದ ಅರಸನನ್ನೂ ಸೋಲಿಸಿದ. ಅವನ ನಂತರ ಅಧಿಕಾರಕ್ಕೆ ಹೋರಾಟ ನಡೆದು ದೇವರಾಯ ಪಟ್ಟಕ್ಕೆ ಬಂದ. ಕೆಲವು ಹಿಂದೂ ರಾಜರ ನೆರವಿನಿಂದಲೇ ಬಹಮನಿ ಸುಲ್ತಾನ ಫಿರೋಜ್‍ಷಾ ದೇವರಾಯನ ಮೇಲೆ ಯುದ್ಧ ಮಾಡಿದ. ದೇವರಾಯನಿಗೆ ಗೆಲುವು ಲಭಿಸಿ, ಆಂಧ್ರದ ಪೂರ್ವ ತೀರದವರೆಗೂ ವಿಜಯನಗರ ವಿಸ್ತರಿಸಲ್ಪಟ್ಟಿತು. ದೇವರಾಯನು ಅರೇಬಿಯಾ ಮತ್ತು ಪರ್ಷಿಯಾ ದೇಶಗಳೊಡನೆ ವ್ಯಾಪಾರ ಸಂಬಂಧ ಬೆಳೆಸಿಕೊಂಡು ಅಲ್ಲಿಂದ ಕುದುರೆಗಳನ್ನು ತರಿಸಿಕೊಳ್ಳುತ್ತಿದ್ದ. ಅವನ ಕಾಲದಲ್ಲೇ ತುಂಗಭದ್ರೆಗೆ ಒಂದು ಅಣೆಕಟ್ಟೆ ಸಹ ನಿರ್ಮಾಣವಾಯಿತು.
ಪ್ರೌಢದೇವರಾಯ ಎಂದೇ ಖ್ಯಾತನಾದ ಇಮ್ಮಡಿ ದೇವರಾಯನ ಕಾಲದಲ್ಲಿ ವಿಜಯನಗರ ಸಾಮ್ರಾಜ್ಯವು ಪ್ರಖ್ಯಾತವಾಯಿತು. ಎರಡು ಬಾರಿ ಬಹಮನಿ ಸುಲ್ತಾನರೊಡನೆ ಯುದ್ಧ ನಡೆಯಿತು. ಫಲಿತಾಂಶ ನಿರ್ಣಾಯಕವಾಗಲಿಲ್ಲ. ಆದರೆ ಆಗ ಬಹಮನಿ ಸುಲ್ತಾನರ ರಾಜಧಾನಿಯು ಗುಲಬರ್ಗಾದಿಂದ ಬೀದರ್‍ಗೆ ಬದಲಾಯಿತು. ದಕ್ಷಿಣದ ಅನೇಕ ರಾಜರುಗಳಿಂದ ಕಪ್ಪ-ಕಾಣಿಕೆಗಳನ್ನು ವಸೂಲು ಮಾಡುತ್ತಿದ್ದ ಇಮ್ಮಡಿ ದೇವರಾಯನು ಎಲ್ಲಾ ಧರ್ಮಗಳನ್ನೂ ಗೌರವಿಸಿದ. ಅವನ ಕಾಲದಲ್ಲೇ ಪರ್ಷಿಯಾದ ಅಬ್ದುಲ್ ರಜಾಕ್ ವಿಜಯನಗರಕ್ಕೆ ಬಂದಿದ್ದ.
ಸಂಗಮ ವಂಶದ ನಂತರ ಸಾಳುವ ವಂಶದವರು ವಿಜಯನಗರವನ್ನು ಆಳಿದರು. ಅವರ ಕಾಲದಲ್ಲಿ ಸಾಮ್ರಾಜ್ಯವು ಅನೇಕ ಆಂತರಿಕ ಕಲಹಗಳಲ್ಲಿ ನಿರತವಾಗಿತ್ತು. ಬಹಮನೀ ರಾಜ್ಯವೂ ದುರ್ಬಲವಾಗಿ ಐದು ಭಾಗಗಳಾಗಿ ಹಂಚಿ ಹೋಯಿತು. ಆನಂತರ ಅಧಿಕಾರಕ್ಕೆ ಬಂದ ತುಳುವ ವಂಶದ ದೊರೆಗಳಲ್ಲಿ ಬಹಳ ಪ್ರಖ್ಯಾತನಾದವನು ಕೃಷ್ಣದೇವರಾಯ. ಭಾರತೀಯ ಇತಿಹಾಸದಲ್ಲಿ ಪ್ರಮುಖನೆಂದು ಪರಿಗಣಿತನಾಗಿರುವ ಕೃಷ್ಣದೇವರಾಯನ ಕಾಲದಲ್ಲಿ ವಿಜಯನಗರ ಸಾಮ್ರಾಜ್ಯವು ವೈಭವ ಮತ್ತು ಪ್ರಖ್ಯಾತಿಯನ್ನು ಗಳಿಸಿತು. ತೆರಿಗೆಗಳನ್ನು ತೆಗೆದು ಜನಾನುರಾಗಿಯಾಗಿ, ರಾಜ್ಯವನ್ನು ರಕ್ಷಿಸಿದ ಕೃಷ್ಣದೇವರಾಯನು 1511ರಲ್ಲಿ ರಾಯಚೂರನ್ನು ಗೆದ್ದುಕೊಂಡ. ಅದನ್ನು ಮತ್ತೆ ಪಡೆಯಲು ಇಸ್ಮಾಯಿಲ್ ಆದಿಲ್‍ಷಹ ವಿಫಲ ಪ್ರಯತ್ನ ನಡೆಸಿದ. ಪ್ರತಾಪರುದ್ರ ಗಜಪತಿಯನ್ನು ಕೃಷ್ಣದೇವರಾಯ ಸೋಲಿಸಿದ. 1522ರಲ್ಲಿ ಬಿಜಾಪುರದ ಆದಿಲ್‍ಷಹನನ್ನು ಗೆದ್ದ ಕೃಷ್ಣದೇವರಾಯ ರಾಜ್ಯವನ್ನು ವಿಸ್ತರಿಸಿದುದಲ್ಲದೆ ಅದನ್ನು ಸಮರ್ಥವಾಗಿ ರಕ್ಷಿಸಿದ. ಅವನ ಕಾಲದಲ್ಲಿ ವಿಜಯನಗರಕ್ಕೆ ಪೆÇೀರ್ಚುಗೀಸ್ ರಾಯಭಾರಿ ಪಾಯಸ್ ಬಂದಿದ್ದನು. ಸ್ವತಃ ಕವಿಯಾದ ಕೃಷ್ಣದೇವರಾಯ ಅನೇಕ ಕವಿಗಳನ್ನು ಪೆÇ್ರೀತ್ಸಾಹಿಸಿದ. ಆತನೇ ಬರೆದ ತೆಲುಗು ಕಾವ್ಯ `ಅಮುಕ್ತ ಮೌಲ್ಯದ' ಎಲ್ಲರ ಮೆಚ್ಚುಗೆಯನ್ನು ಪಡೆದಿದೆ.
ಕೃಷ್ಣದೇವರಾಯನ ನಂತರ ಅಧಿಕಾರಕ್ಕೆ ನಡೆದ ಆಂತರಿಕ ಕಲಹದಲ್ಲಿ ಬಿಜಾಪುರದ ಆದಿಲ್‍ಷಹನ ನೆರವನ್ನು ಪಡೆದ ಅಳಿಯ ರಾಮರಾಯ ಕೃಷ್ಣದೇವರಾಯನ ಕೊನೆಯ ತಮ್ಮ ರಂಗನ ಮಗ ಸದಾಶಿವನನ್ನು ಪಟ್ಟಕ್ಕೆ ತಂದ. ಹೆಸರಿಗೆ ಸದಾಶಿವ ರಾಜನಾದರೂ, ಅಧಿಕಾರವೆಲ್ಲಾ ರಾಮರಾಯನದೇ ಆಯಿತು. ಸೈನ್ಯದಲ್ಲಿ ಪ್ರಮುಖ ಅಧಿಕಾರ ಸ್ಥಾನಗಳಲ್ಲಿ ಮುಸಲ್ಮಾನರನ್ನೇ ಹೆಚ್ಚಾಗಿ ನೇಮಿಸಿಕೊಳ್ಳಲಾಯಿತು. ವ್ಯಾಪಾರ ಸಂಬಂಧವಾಗಿ ಪೆÇೀರ್ಚುಗೀಸರೊಡನೆ ವೈರವನ್ನು ಬೆಳೆಸಿಕೊಂಡ ರಾಮರಾಯನ ವಿರುದ್ಧ ಷಾಹಿ ಸುಲ್ತಾನರು ಒಂದಾಗಿ ಹೋರಾಡಲು ಮುಂದಾದರು. ಅದರ ಫಲವಾಗಿ 1565ರ ಜನವರಿ 23ರಂದು ರಕ್ಕಸಗಿ - ತಂಗಡಗಿಯ ಬಳಿ ನಡೆದ ಯುದ್ಧದಲ್ಲಿ ವಿಜಯನಗರಕ್ಕೆ ನಿರ್ಣಾಯಕವಾಗಿ ಸೋಲಾಯಿತು. ಅಳಿಯ ರಾಮರಾಯನು ಯುದ್ಧರಂಗದಲ್ಲೇ ಕೊಲ್ಲಲ್ಪಟ್ಟ.
ವಿಜಯನಗರ ಸಾಮ್ರಾಜ್ಯದಲ್ಲಿ ಕನ್ನಡ ಸಾಹಿತ್ಯವು ಪೆÇ್ರೀತ್ಸಾಹ ಪಡೆಯಿತು. ಅನೇಕ ದೇವಾಲಯಗಳು ಹೊಸದಾಗಿ ನಿರ್ಮಿತವಾದವು. ಹಳೆಯ ದೇವಾಲಯಗಳು ಜೀರ್ಣೋದ್ಧಾರಗೊಂಡವು. ಕೆರೆಕಟ್ಟೆಗಳು, ಕಾಲುವೆಗಳು ನಿರ್ಮಾಣವಾಗಿ ನೀರಾವರಿ ಸೌಲಭ್ಯ ಉತ್ತಮಗೊಂಡಿತು. ವಿದೇಶಗಳೊಡನೆ ವ್ಯಾಪಾರ ಸಂಬಂಧ ಬೆಳೆಯಿತು.
ಬಹಮನಿ ಸುಲ್ತಾನರು
ದೆಹಲಿಯಲ್ಲಿ ಮಹಮದ್ ಬಿನ್ ತೊಗಲಕನ ನಿರಂಕುಶ ಆಳ್ವಿಕೆಯಿಂದ ಬೇಸತ್ತು ಬಂಡೆದ್ದ ಅವನ ಕೆಲವು ಅಧಿಕಾರಿಗಳು, ತಮ್ಮ ಅಧಿಕಾರ ವ್ಯಾಪ್ತಿಯ ಪ್ರದೇಶಗಳನ್ನು ತಾವೇ ಸ್ವತಂತ್ರರಾಗಿ ಆಳತೊಡಗಿದರು. ಅಂತಹವರಲ್ಲಿ ಬಹಮನಿ ಸುಲ್ತಾನರೂ ಒಬ್ಷರು. ಗುಲ್ಷರ್ಗವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಅಲ್ಲಾ ಉದ್ದೀನ್ ಹಸನ್ ಬಹ್ಮನ್ ಷಹನಿಂದ ಕ್ರಿ.ಶ. 1347ರಲ್ಲಿ ಸ್ಥಾಪಿತವಾದ ಬಹಮನಿ ವಂಶವು ಕ್ರಿ.ಶ. 1518ರ ವರೆಗೆ ಕರ್ನಾಟಕದ ಬೀದರ್, ಗುಲ್ಷರ್ಗ ಮತ್ತು ರಾಯಚೂರುಗಳನ್ನೊಳಗೊಂಡ ಪ್ರದೇಶಗಳನ್ನು ಆಳಿತು. ಹಸನ್ ಬಹ್ಮನ್ ಷಹನ ನಂತರ ಅವನ ಮಗ 1ನೆಯ ಮಹಮದನು ಪಟ್ಟಕ್ಕೆ ಬಂದ. ಅವನ ಕಾಲದಲ್ಲಿ ವಿಜಯನಗರದೊಡನೆ ಹಲವು ಯುದ್ಧಗಳು ನಡೆದವು. ಆ ನಂತರ ಆಳಿದ ರಾಜರುಗಳೂ ವಿಜಯನಗರದೊಡನೆ ಯುದ್ಧಗಳಲ್ಲಿ ನಿರತರಾಗಬೇಕಾಯಿತು. ಸಂತ ಎಂದೇ ಗೌರವಿಸಲ್ಪಡುವ ಮಹಮದ್‍ನ ಕಾಲದಲ್ಲಿ ರಾಜಧಾನಿಯು ಬೀದರ್‍ಗೆ ಬದಲಾಯಿತು. ಕ್ರೂರಿಯೆಂದು ಪರಿಗಣಿತನಾದ ಸುಲ್ತಾನ್ ಹುಮಾಯೂನ್‍ನ ಮಂತ್ರಿಯಾದ ಮಹಮದ್ ಗವಾನನು ಆರ್ಥಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಅವಶ್ಯಕವಾದ ಸುಧಾರಣೆಗಳನ್ನು ಮಾಡಿದ. ಬೃಹತ್ ಗ್ರಂಥಭಂಡಾರವೊಂದನ್ನು ಹೊಂದಿದ್ದ. ಮಹಮದ್ ಗವಾನನ ಮೇಲೆ ಬಂದ ದೂರುಗಳೆಲ್ಲ ಸುಳ್ಳು ಎಂದು ತಿಳಿಯುವ ಮೊದಲೇ ಅವನನ್ನು ಗಲ್ಲಿಗೇರಿಸಲಾಗಿತ್ತು. ಕ್ರಿ.ಶ. 1518ರಲ್ಲಿ ಬಹಮನಿ ರಾಜ್ಯದಲ್ಲಿ ಪ್ರಾಂತಾಧಿಕಾರಿಗಳಾಗಿದ್ದವರೇ ಸ್ವತಂತ್ರರಾಗಿ ಆಳತೊಡಗಿದಾಗ, ರಾಜ್ಯವು ಐದು ಭಾಗಗಳಾಗಿ ಒಡೆಯಿತು. ಅವುಗಳೆಂದರೆ ಬಿಜಾಪುರ (ಆದಿಲ್‍ಷಾಹಿ), ಬೀದರ್ (ಬರೀದ್‍ಷಾಹಿ), ಅಹಮದ್ ನಗರ (ಇಮದ್‍ಷಾಹಿ), ಗೊಲ್ಕೊಂಡ (ನಿಜಾಮ್‍ಷಾಹಿ) ಮತ್ತು ಗುಲ್ಷರ್ಗಾ (ಕುತುಬ್‍ಷಾಹಿ).
ಬಹಮನಿ ರಾಜ್ಯದ ಅವನತಿಯ ನಂತರ ಕರ್ನಾಟಕದಲ್ಲಿ ಪ್ರಬಲರಾದ ಬಿಜಾಪುರದ ಆದಿಲ್‍ಷಾಹಿಗಳೂ ವಿಜಯನಗರದೊಡನೆ ನಿರಂತರ ಹೋರಾಟಗಳಲ್ಲಿ ತೊಡಗಿದ್ದರು. ಷಾಹಿ ಸುಲ್ತಾನರ ಒಕ್ಕೂಟದಲ್ಲಿ ಸೇರಿ ವಿಜಯನಗರದ ಮೇಲೆ ಯುದ್ಧ ಮಾಡಿ, ಸೋಲಿಸಿದವರಲ್ಲಿ ಆದಿಲ್‍ಷಾಹಿಗಳೂ ಇದ್ದರು. ವಿಜಯನಗರದ ಪತನಾನಂತರ ರಾಜ್ಯ ವಿಸ್ತರಣೆ ಮಾಡಿಕೊಂಡ ಆದಿಲ್‍ಷಾಹಿಗಳಲ್ಲಿ 2ನೆಯ ಇಬ್ರಾಹಿಂ ಬಹಳ ಪ್ರಸಿದ್ಧನಾಗಿದ್ದಾನೆ. ಸ್ವತಃ ಗಾಯಕನಾಗಿದ್ದ ಅವನು ಬರೆದಿರುವ `ಕಿತಾಬ್ - ಎ - ನವರಸ್' ಸಂಗೀತ ಕುರಿತ ಉತ್ತಮ ಗ್ರಂಥವಾಗಿದೆ. ಎಲ್ಲಾ ಮತ ಧರ್ಮವನ್ನು ಗೌರವಿಸಿದ 2ನೆಯ ಇಬ್ರಾಹಿಂನ ಕಾಲಕ್ಕೆ ದೆಹಲಿಯಲ್ಲಿ ಮೊಗಲರು ಪ್ರಬಲರಾಗುತ್ತಿದ್ದರು. ಇಬ್ರಾಹಿಂನ ನಂತರ ಆಳಿದ ಮಹಮ್ಮದನು ಆ ಹೊತ್ತಿಗೆ ಪ್ರಬಲನಾಗಿದ್ದ ಶಿವಾಜಿಯ ಜೊತೆಗೂ ಹೋರಾಡಬೇಕಾಯಿತು. ಅವನ ಕಾಲದಲ್ಲಿ ಬಿಜಾಪುರದಲ್ಲಿ ನಿರ್ಮಾಣವಾದ ಗೋಲಗುಮ್ಮಟವು ಕರ್ನಾಟಕದ ವಾಸ್ತುಶಿಲ್ಪದ ಮಹತ್ತರ ಉದಾಹರಣೆಯಾಗಿದೆ.
ಬಹಮನಿ ಸುಲ್ತಾನರು ಮತ್ತು ಆ ನಂತರ ಷಾಹಿ ಸುಲ್ತಾನರುಗಳು ಅನೇಕ ಮಸೀದಿ, ಕೆರೆಕಟ್ಟೆ ಇತ್ಯಾದಿಗಳನ್ನು ಕಟ್ಟಿಸಿದರು. ಅವರ ಕಾಲದ ಇಂಡೋ - ಸಾರ್ಸೆನಿಕ್ ಶೈಲಿಯ ಕಟ್ಟಡಗಳು ಕರ್ನಾಟಕದ ವಾಸ್ತುಶಿಲ್ಪದ ಇತಿಹಾಸದಲ್ಲಿ ವಿಶೇಷ ಗಮನ ಸೆಳೆದಿವೆ.