|
||
ಮದುವೆಯ ನಂತರ ಅಧ್ಯಾಪಕ ವೃತ್ತಿಗೆ ವಿದಾಯ ಹೇಳಿದ ಕೃಷ್ಣರಾವರು ತಂಜಾವೂರಿಗೆ ಹೋಗಿ ಮೀನಾಕ್ಷಿ ಸುಂದರಂ ಪಿಳ್ಳೆ ಅವರಿಂದ ಹೆಚ್ಚಿನ ತರಬೇತಿ ಪಡೆದರು. ನಂತರ ದಂಪತಿಗಳಿಬ್ಷರು ಭರತನಾಟ್ಯ ಕಲಿಸಲು ನಿರ್ಧರಿಸಿದರು. ಅವರಿಬ್ಷರ ಪರಿಶ್ರಮದ ಫಲವೇ ಮಹಾಮಾಯಾ ನಾಟ್ಯಶಾಲೆ. ಇಲ್ಲಿ ರಾಜ್ಯದ, ಹೊರರಾಜ್ಯಗಳಷ್ಟೇಯಲ್ಲದೆ ಹೊರದೇಶಗಳಿಂದಲೂ ವಿದ್ಯಾರ್ಥಿಗಳು ಬಂದು ನೃತ್ಯ ಕಲಿತು ಪ್ರಖ್ಯಾತರಾಗಿದ್ದಾರೆ. |
||
ಭರತ ನಾಟ್ಯಕ್ಕೆ ಸಂಬಂಧಿಸಿದಂತೆ ಅನೇಕ ಪ್ರಾತ್ಯಕ್ಷಿಕೆ ಶಿಬಿರಗಳನ್ನು, ಕಾರ್ಯಾಗಾರಗಳನ್ನು ದೇಶ - ವಿದೇಶಗಳಲ್ಲಿ ನಡೆಸಿದ ಈ ದಂಪತಿಗಳು, ರಾಣಿ ಶಾಂತಲಾ, ಗೀತ ಗೋವಿಂದ, ಕಾಮದಹನ ಮುಂತಾದ ಕಲಾ ಪ್ರದರ್ಶನಗಳನ್ನು ನೀಡಿ ಪ್ರಸಿದ್ಧಿ ಪಡೆದಿದ್ದಾರೆ. |
||
ಕೃಷ್ಣರಾವ್ ಅವರು ನೃತ್ಯಕ್ಕೆ ಸಂಬಂಧಿಸಿದಂತೆ ಕನ್ನಡ - ಇಂಗ್ಲಿಷ್ಗಳಲ್ಲಿ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳೆಂದರೆ - ಭಾರತೀಯ ನೃತ್ಯ ನಿಘಂಟು, ಟೆಕ್ನಿಕಲ್ ಟರ್ಮ್ಸ್ ಆಫ್ ಭರತನಾಟ್ಯಂ ಮುಂತಾದವು. ಕರ್ನಾಟಕ ನೃತ್ಯ ಕಲಾಪರಿಷತ್ತಿನ ಅಧ್ಯಕ್ಷರಾಗಿಯೂ, ಬೆಂಗಳೂರು ವಿಶ್ವವಿದ್ಯಾಲಯದ ನೃತ್ಯ ವಿಭಾಗದ ಗೌರವ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿರುವ ಕೃಷ್ಣರಾವ್ ಅವರ ನಾಟ್ಯ ಪ್ರತಿಭೆಯನ್ನು ಅರಸಿಬಂದ ಪ್ರಶಸ್ತಿ - ಪುರಸ್ಕಾರಗಳು ಹಲವು. ಅವುಗಳಲ್ಲಿ ಕರ್ನಾಟಕ ನೃತ್ಯ ಸಂಗೀತ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸರ್ಕಾರದ ರಾಷ್ಟ್ರೀಯ ಪುರಸ್ಕಾರ, ರಾಜ್ಯೋತ್ಸವ ಪ್ರಶಸ್ತಿ ಹಾಗೂ ನಾಟ್ಯರಾಣಿ ಶಾಂತಲಾ ಪ್ರಶಸ್ತಿ ಪ್ರಮುಖವಾದವು. |