ವಿಶೇಷ ಸೂಚನೆ

ನಾಡು-ನುಡಿ

ಕಲ್ಯಾಣದ ಚಾಲುಕ್ಯರು
ರಾಷ್ಟ್ರಕೂಟದ ಕೊನೆಯ ದೊರೆ ಇಮ್ಮಡಿ ಕರ್ಕನನ್ನು ಸೋಲಿಸಿ, ಸಾಮಂತನೇ ಆಗಿದ್ದ ಇಮ್ಮಡಿ ತೈಲ ಅಧಿಕಾರ ವಹಿಸಿಕೊಂಡ. ಬಾದಾಮಿ ಚಾಲುಕ್ಯರ ವಂಶವೇ ಮುಂದುವರಿದು, ನಂತರ ಕಲ್ಯಾಣವು ಅವರ ಪ್ರಮುಖ ರಾಜಧಾನಿಯಾದ್ದರಿಂದ, ಕಲ್ಯಾಣದ ಚಾಲುಕ್ಯರು ಎನಿಸಿಕೊಂಡರು. ರಾಷ್ಟ್ರಕೂಟರು ಚೋಳರ ಮೇಲೆ ನಡೆಸಿದ್ದ ಹೋರಾಟವನ್ನು ಮುಂದುವರೆಸಿದ ಇಮ್ಮಡಿ ತೈಲ ಪರಮಾರ ರಾಜ್ಯವನ್ನು ವಶಪಡಿಸಿಕೊಂಡ. ಇಮ್ಮಡಿ ತೈಲನ ಮಗ ಆಹವಮಲ್ಲ ಸತ್ಯಾಶ್ರಯನ ಕಾಲದಲ್ಲೇ ರನ್ನ `ಸಾಹಸಭೀಮ ವಿಜಯ'ವನ್ನು ಬರೆದದ್ದು. ಸತ್ಯಾಶ್ರಯನ ನಂತರ ದಶವರ್ಮ, 5ನೆಯ ವಿಕ್ರಮಾದಿತ್ಯ, ಅಯ್ಯಣ, ಇಮ್ಮಡಿ ಜಯಸಿಂಹ, 1ನೆಯ ಸೋಮೇಶ್ವರರು ರಾಜ್ಯಭಾರ ಮಾಡಿದರು. ಇವರೆಲ್ಲರ ಕಾಲದಲ್ಲೂ ಚೋಳರು ಮತ್ತು ಪರಮಾರರೊಡನೆ ಯುದ್ಧಗಳು ನಡೆದವು. 1ನೆಯ ಸೋಮೇಶ್ವರನ ಕಾಲದಲ್ಲಿ ಚೋಳ ರಾಜಾಧಿರಾಜನು ಯುದ್ಧದಲ್ಲಿ ಮರಣ ಹೊಂದಿದ. ಆದರೂ ಚೋಳ ಚಾಲುಕ್ಯ ಯುದ್ಧಗಳು 1ನೆಯ ಸೋಮೇಶ್ವರನ ಮಗ 2ನೆಯ ಸೋಮೇಶ್ವರನ ಕಾಲದಲ್ಲೂ ಮುಂದುವರಿದವು. 1ನೆಯ ಸೋಮೇಶ್ವರನ ಕಾಲದಲ್ಲಿ ಚೋಳ ರಾಜಾಧಿರಾಜನು ಯುದ್ಧದಲ್ಲಿ ಮರಣ ಹೊಂದಿದ. ಆದರೂ ಚೋಳ ಚಾಲುಕ್ಯ ಯುದ್ಧಗಳು 1ನೆಯ ಸೋಮೇಶ್ವರನ ಮಗ 2ನೆಯ ಸೋಮೇಶ್ವರನ ಕಾಲದಲ್ಲೂ ಮುಂದುವರಿದವು. 1ನೆಯ ಸೋಮೇಶ್ವರನ ಮತ್ತೊಬ್ಷ ಮಗ 6ನೆಯ ವಿಕ್ರಮಾದಿತ್ಯನು ತನ್ನ ಅಣ್ಣ 2ನೆಯ ಸೋಮೇಶ್ವರನನ್ನು ರಾಜ್ಯಾಧಿಕಾರದಿಂದ ಕೆಳಗಿಳಿಸಿ ತಾನೇ ಚಕ್ರವರ್ತಿಯಾದ ನಂತರ ಚೋಳರೊಡನೆ ವೈವಾಹಿಕ ಸಂಬಂಧ ಬೆಳೆಸಿ ಚಾಲುಕ್ಯ - ಚೋಳ ವೈರಕ್ಕೆ ಕೊನೆ ಮಾಡಿದ. `ತ್ರಿಭುವನಮಲ್ಲ' ಎಂದೇ ಹೆಸರಾದ 6ನೆಯ ವಿಕ್ರಮಾದಿತ್ಯನು ಉತ್ತರದ ರಾಜರೊಡನೆ ಹಲವು ಯುದ್ಧಗಳನ್ನು ಮಾಡಿ ರಾಜ್ಯವನ್ನು ವಿಸ್ತರಿಸಿ ಕಲ್ಯಾಣ ಚಾಲುಕ್ಯ ವಂಶದ ಪ್ರಖ್ಯಾತ ದೊರೆ ಎನಿಸಿಕೊಂಡಿದ್ದಾನೆ. ಅವನ ಕಾಲದಲ್ಲಿ ವಿಜ್ಞಾನೇಶ್ವರನ `ಮಿತಾಕ್ಷರ' ಮತ್ತು ಬಿಲ್ಹಣನ `ವಿಕ್ರಮಾಂಕದೇವ ಚರಿತೆ'ಗಳು ರಚಿತವಾದುವು. ಅನೇಕ ದೇವಾಲಯಗಳು ನಿರ್ಮಾಣಗೊಂಡವು. ಕ್ರಿ.ಶ. 1075ರಿಂದ 1122ರ ವರೆಗೆ ಆಳಿ ತನ್ನ ಆಳ್ವಿಕೆಯ ಮೊದಲ ವರ್ಷವೇ ಚಾಲುಕ್ಯ ವಿಕ್ರಮ ಶಕೆಯನ್ನು ಆರಂಭಿಸಿದ. 6ನೆಯ ವಿಕ್ರಮಾದಿತ್ಯನ ನಂತರ ಅಧಿಕಾರಕ್ಕೆ ಬಂದ ಅವನ ಮಗ ಮುಮ್ಮಡಿ ಸೋಮೇಶ್ವರನು ವಿದ್ವಾಂಸನಾಗಿ ಹೆಸರು ಪಡೆದಿದ್ದಾನೆ. ಅವನೇ ರಚಿಸಿದ `ಮಾನಸೋಲ್ಲಾಸ' ಅಥವಾ `ಅಭಿಲಷಿತಾರ್ಥ ಚಿಂತಾಮಣಿ'ಯು ಮೌಲಿಕ ವಿಶ್ವಕೋಶವಾಗಿದೆ. 6ನೆಯ ವಿಕ್ರಮಾದಿತ್ಯನ ಕಾಲಕ್ಕೆ ಪ್ರಬಲ ಅಧಿಕಾರ ಸ್ಥಾನಗಳಲ್ಲಿದ್ದ ಕಲಚುರ್ಯರು, 4ನೆಯ ಮುಮ್ಮಡಿ ತೈಲನನ್ನು ಅಧಿಕಾರದಿಂದ ಕೆಳಗಿಳಿಸಿ ತಾವೇ ರಾಜ್ಯಾಧಿಕಾರ ವಹಿಸಿಕೊಂಡರು.
ಕಲಚುರ್ಯರು
ಕಲ್ಯಾಣ ಚಾಲುಕ್ಯ ಮುಮ್ಮಡಿ ತೈಲನನ್ನು ಅಧಿಕಾರದಿಂದ ಕೆಳಗಿಳಿಸಿ ಅಧಿಕಾರ ವಹಿಸಿಕೊಂಡ ಕಲಚುರ್ಯ ವಂಶದ ಇಮ್ಮಡಿ ಬಿಜ್ಜಳ ಮಹತ್ವಾಕಾಂಕ್ಷಿಯಾಗಿದ್ದ. ಆದರೆ ಹೆಚ್ಚು ಕಾಲ ಅವನು ಆಳಲಾಗಲಿಲ್ಲ. ಕಲಚುರ್ಯರ ಆರು ಜನ ದೊರೆಗಳ ಒಟ್ಟು ಆಳ್ವಿಕೆಯ ಕಾಲ ಕೇವಲ 22 ವರ್ಷಗಳು. ಅವರಲ್ಲಿ ಇಮ್ಮಡಿ ಬಿಜ್ಜಳನ ಆಳ್ವಿಕೆಯೇ ಐದು ವರ್ಷ ಅವಧಿಯದು. ಬಸವೇಶ್ವರರು ಕಲಚುರ್ಯರ ಕಾಲದಲ್ಲೇ ಜೀವಿಸಿದ್ದರು. ಅದು ಧಾರ್ಮಿಕ ಮತ್ತು ಸಾಮಾಜಿಕ ಸಂಘರ್ಷಗಳ ಕಾಲವಾಗಿತ್ತು.
ಹೊಯ್ಸಳರು
ಗಂಗರ ನಂತರ ಕರ್ನಾಟಕದ ದಕ್ಷಿಣ ಭಾಗದಲ್ಲಿ ಪ್ರಬಲರಾಗಿದ್ದ ಹೊಯ್ಸಳರು ಮೊದಲಿಗೆ ಕಲ್ಯಾಣ ಚಾಲುಕ್ಯರ ಮಾಂಡಲಿಕರೇ ಆಗಿದ್ದರು. ನೃಪಕಾಮ, ವಿನಯಾದಿತ್ಯ, ಎರೆಯಂಗ ಮತ್ತು 1ನೆಯ ಬಲ್ಲಾಳನ ನಂತರ ಹೊಯ್ಸಳ ದೊರೆಯಾದ ವಿಷ್ಣುವರ್ಧನನು ಸ್ವತಂತ್ರನಾಗಲು ಪ್ರಯತ್ನಿಸಿದನಾದರೂ ಗೆಲುವು ದೊರೆಯಲಿಲ್ಲ. ಚೆಂಗಾಳ್ವರು, ಆಳ್ವಖೇಡರು, ಉಚ್ಚಂಗಿಯ ಪಾಂಡ್ಯರು, ದೇವಗಿರಿಯ ಸೇಉಣರು, ಹಾನಗಲ್ಲಿನ ಕದಂಬರು ಇತ್ಯಾದಿ ರಾಜರನ್ನು ಸೋಲಿಸಿ ಪ್ರಬಲನಾದ ವಿಷ್ಣುವರ್ಧನನು ಚಾಲುಕ್ಯರನ್ನು ಪೂರ್ಣವಾಗಿ ಗೆದ್ದು ಸ್ವತಂತ್ರನಾಗಲಿಲ್ಲ. ಆದರೆ ಅವನ ಮೊಮ್ಮಗ ಇಮ್ಮಡಿ ವೀರಬಲ್ಲಾಳನು ಕ್ರಿ.ಶ. 1190ರಲ್ಲಿ ಕಲ್ಯಾಣದ ಚಾಲುಕ್ಯರನ್ನು ಗೆದ್ದು ಸ್ವತಂತ್ರನಾದ. ಆ ವೇಳೆಗೆ ಚೋಳ ಹೊಯ್ಸಳ ವೈರವೂ ಕೊನೆಗೊಂಡಿತ್ತು. ಇಮ್ಮಡಿ ವೀರಬಲ್ಲಾಳನ ಮೊಮ್ಮಗ ಸೋಮೇಶ್ವರನು ತನ್ನ ಇಬ್ಷರು ಮಕ್ಕಳಿಗೆ ಹೊಯ್ಸಳ ರಾಜ್ಯವನ್ನು ಹಂಚಿದ. ಆಗ ರಾಮನಾಥನು ಕಣ್ಣಾನೂರನ್ನು ರಾಜಧಾನಿ ಮಾಡಿಕೊಂಡು ಆಳಿದ. ಆ ಕಾಲಕ್ಕೆ ಮುಸಲ್ಮಾನರ ದಾಳಿ ಅಧಿಕಗೊಳ್ಳುತ್ತಿತ್ತು. ದೆಹಲಿಯ ಖಿಲ್ಜಿ ವಂಶದ ಅಲ್ಲಾ ಉದ್ದೀನನ ಸೇನಾಧಿಪತಿ ಮಲ್ಲಿಕ್ ಕಾಫರ್ ಹೊಯ್ಸಳ ರಾಜಧಾನಿ ದ್ವಾರಸಮುದ್ರದ ಮೇಲೆ ಹಲವು ಬಾರಿ ದಾಳಿ ಮಾಡಿದ. ಅಂತಹ ಒಂದು ದಾಳಿಯಲ್ಲಿ ಮುಮ್ಮಡಿ ಬಲ್ಲಾಳನ ಮಗ 4ನೆಯ ಬಲ್ಲಾಳ ಸೆರೆಯಾದ. ಹೆಚ್ಚುತ್ತಿದ್ದ ಮುಸಲ್ಮಾನರ ದಾಳಿಯನ್ನು ತಡೆಗಟ್ಟಲು ದಕ್ಷಿಣದ ರಾಜರೆಲ್ಲ ಒಂದಾಗಬೇಕೆಂಬ ಕನಸು ಕಂಡಿದ್ದ ಮುಮ್ಮಡಿ ಬಲ್ಲಾಳ ಹೊಯ್ಸಳ ಸಾಮ್ರಾಜ್ಯದ ಗಡಿಗಳಲ್ಲಿ ಪ್ರಬಲರಾದ ನಾಯಕರುಗಳಿಗೆ ಆಡಳಿತದ ಜವಾಬ್ದಾರಿಯನ್ನು ನೀಡಿದ್ದ. 4ನೆಯ ಬಲ್ಲಾಳನ ಕಾಲಕ್ಕೆ ಹೊಯ್ಸಳ ಸಾಮ್ರಾಜ್ಯ ಅವನತಿ ಹೊಂದಿತ್ತು. ಹೊಯ್ಸಳರು ಅನೇಕ ದೇವಾಲಯಗಳನ್ನು ನಿರ್ಮಿಸಿ ಕರ್ನಾಟಕದ ವಾಸ್ತು ಮತ್ತು ಮೂರ್ತಿಶಿಲ್ಪಕ್ಕೆ ನೀಡಿರುವ ಕೊಡುಗೆ ಅನನ್ಯ. ಬೇಲೂರು, ಹಳೆಬೀಡು, ಮತ್ತಿತರ ಸ್ಥಳಗಳಲ್ಲಿ ಅವರ ಕಾಲದ ಅತ್ಯುತ್ಕಷ್ಟ ದೇವಾಲಯಗಳನ್ನು ಕಾಣಬಹುದು.
ದೇವಗಿರಿಯ ಸೇಉಣರು
ಮೊದಲಿಗೆ ಕಲ್ಯಾಣ ಚಾಲುಕ್ಯರ ಮಾಂಡಲಿಕರಾಗಿದ್ದ ಸೇಉಣರು, ಆರನೆಯ ವಿಕ್ರಮಾದಿತ್ಯನ ನಂತರ ಸ್ವತಂತ್ರರಾದರು. ಕ್ರಿ.ಶ. 1173ರಲ್ಲಿ ಸೇಉಣ ವಂಶದ ಭಿಲ್ಲಮನು ಹೊಯ್ಸಳರೊಡನೆ ಯುದ್ಧಗಳಲ್ಲಿ ನಿರತನಾದ. ಅನೇಕ ಸಾಮಂತರನ್ನು ಸೋಲಿಸಿ ರಾಜ್ಯ ವಿಸ್ತರಿಸಿಕೊಂಡು ದೇವಗಿರಿಯಿಂದ (ಈಗಿನ ಔರಂಗಾಬಾದ್ ಜಿಲ್ಲೆಯ ದೌಲತಾಬಾದ್) ಆಳಿದ ಸೇಉಣರಲ್ಲಿ ಇಮ್ಮಡಿ ಸಿಂಘಣನು ಪ್ರಖ್ಯಾತನಾಗಿದ್ದಾನೆ. ತುಂಗಭದ್ರೆಯಿಂದ ನರ್ಮದೆಯವರೆಗೆ ಆಳಿದ ಸೇಉಣರು ಒಂದೆಡೆ ಹೊಯ್ಸಳರ, ಮತ್ತೊಂದೆಡೆ ಕಾಕತೀಯರ ಆಕ್ರಮಣದಿಂದ ರಕ್ಷಿಸಿಕೊಳ್ಳಬೇಕಾಗಿತ್ತು. ಸೇಉಣ ರಾಮಚಂದ್ರನ ಕಾಲಕ್ಕೆ ದೆಹಲಿಯ ಅಲ್ಲಾವುದ್ದೀನ್ ಖಿಲ್ಜಿಯು ದಕ್ಷಿಣ ಭಾರತದ ಮೇಲೆ ಅನೇಕ ಬಾರಿ ದಾಳಿ ಮಾಡಿದ. ರಾಮಚಂದ್ರನು ಮಲ್ಲಿಕ್‍ಕಾಫರನ ಬಂಧಿಯಾಗಿದ್ದ. ಆನಂತರ ಸೇಉಣ ದೊರೆಗಳು ಖಿಲ್ಜಿ ಸಂತತಿಯವರ ಅಧೀನರಾಗಿಯೇ ಆಳ್ವಿಕೆ ಮಾಡಿದರು. ಖಿಲ್ಜಿ ಸಂತತಿಯವರನ್ನು ಎದುರಿಸಿದ ಮುಮ್ಮಡಿ ಸಿಂಘಣನು ಸಾವನ್ನು ಎದುರಿಸಬೇಕಾಯಿತು. ಅಚ್ಚ ಕನ್ನಡಿಗರಾದ ದೇವಗಿರಿಯ ಸೇಉಣರು ಮರಾಠೀ ಸಾಹಿತ್ಯ ಮತ್ತು ಕಲೆಗಳಿಗೆ ಹೆಚ್ಚು ಪೆÇ್ರೀತ್ಸಾಹ ನೀಡಿದರು.