ವಿಶೇಷ ಸೂಚನೆ

ಯುವ ಸೌರಭ

ಯುವ ಸೌರಭ

ಯುವಸೌರಭ ಕಾರ್ಯಕ್ರಮವು ನಾಡಿನ ಯುವ ಪ್ರತಿಭೆಗಳಿಗೆ ತಮ್ಮ ಪ್ರತಿಭಾ ಪ್ರದರ್ಶನವನ್ನು ನೀಡಲು ಒದಗಿಸಲಾಗಿರುವ ಒಂದು ವೇದಿಕೆ. ಈ ಕಾರ್ಯಕ್ರಮದ ಮೂಲಕ ನಾಡಿನ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ವಿಶೇಷ ಕಾರ್ಯಕ್ರಮ ರೂಪಿಸಿ ಯುವ ಪ್ರತಿಭಾವಂತ ಕಲಾವಿದರಿಗೆ ತಮ್ಮ ಪ್ರತಿಭಾ ಪ್ರದರ್ಶನ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ.  

ರಾಜಧಾನಿ ನಗರ ಬೆಂಗಳೂರಿನಲ್ಲಿ ಕನ್ನಡ ಭವನದ ‘ನಯನ’ ಸಭಾಂಗಣದಲ್ಲಿ ಪ್ರತಿ ಬುಧವಾರ ಯುವ ಪ್ರತಿಭಾವಂತ ಕಲಾವಿದರ, ಗಾಯನ, ನರ್ತನ ಹಾಗೂ ಇನ್ನಿತರ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ರೂಪಿಸಿ ನಿರಂತರ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ.