ವಿಶೇಷ ಸೂಚನೆ

ನಾಡು-ನುಡಿ

ಸ್ವಾತಂತ್ರ್ಯ ಹೋರಾಟ
ಬ್ರಿಟಿಷರಿಂದ ತಮ್ಮ ಸ್ವಾತಂತ್ರ ್ಯವನ್ನು ರಕ್ಷಿಸಿಕೊಳ್ಳಲು ಟಿಪ್ಪುಸುಲ್ತಾನನಂತೆಯೇ ಇನ್ನೂ ಹಲವರು ಪ್ರಯತ್ನಿಸಿದರು. ಅವರ ಪೈಕಿ ಕಿತ್ತೂರು ಸಂಸ್ಥಾನದ ರಾಣಿ ಚೆನ್ನಮ್ಮ ಕೂಡ ಒಬ್ಷಳು. ಹಲವಾರು ಸಣ್ಣ ಪುಟ್ಟ ಸಂಸ್ಥಾನಗಳೂ (ಸುರಪುರ, ನರಗುಂದ ಇತ್ಯಾದಿ) ಬ್ರಿಟಿಷರ ವಿರುದ್ಧ ಹೋರಾಡಿದವು. ಭಾರತದ ಸ್ವಾತಂತ್ರ ್ಯಕ್ಕಾಗಿ ನಡೆದ ಚಳುವಳಿಯಲ್ಲಿ ಕರ್ನಾಟಕದ ಪಾತ್ರವು ಮಹತ್ವದ್ದಾಗಿದೆ. ಮೊದಲಿಗೆ ಬ್ರಿಟಿಷ್ ಆಳ್ವಿಕೆಗೆ ಸೇರಿದ ಕರ್ನಾಟಕದ ಪ್ರಾಂತಗಳಲ್ಲಿ ಆರಂಭವಾದ ಹೋರಾಟವು ನಂತರ ಕರ್ನಾಟಕದ ಎಲ್ಲೆಡೆ ಹರಡಿತು. ಅನೇಕ ಧುರೀಣರು ಸ್ವಾತಂತ್ರ ್ಯಕ್ಕಾಗಿ ಹೋರಾಡಿದರು. ಕಾನೂನು ಭಂಗ ಚಳುವಳಿ, ಕರ ನಿರಾಕರಣೆ, ಕ್ವಿಟ್ ಇಂಡಿಯಾ ಇತ್ಯಾದಿ ಪ್ರಮುಖ ಚಳುವಳಿಗಳಲ್ಲಿ ಕರ್ನಾಟಕವು ಮಹತ್ವದ ಪಾತ್ರ ವಹಿಸಿತು. 1947ರ ಆಗಸ್ಟ್ 15ರಂದು ಭಾರತಕ್ಕೆ ಸ್ವಾತಂತ್ರ ್ಯ ಬಂದಾಗ ಬ್ರಿಟಿಷ್ ಆಳ್ವಿಕೆಯ ಕರ್ನಾಟಕದ ಭಾಗಗಳೂ ಸ್ವತಂತ್ರವಾದವು. 1947 ಅಕ್ಟೋಬರ್ 24ರಂದು ಮೈಸೂರು ಸಂಸ್ಥಾನವೂ ಜವಾಬ್ದಾರಿ ಸರ್ಕಾರಕ್ಕೆ ಒಪ್ಪಿ ಭಾರತದ ಗಣರಾಜ್ಯದಲ್ಲಿ ಸೇರಿತು.
ಕರ್ನಾಟಕ ಏಕೀಕರಣ

ಸ್ವಾತಂತ್ರ ್ಯ ಬಂದ ನಂತರವೂ ಕರ್ನಾಟಕವು ಬೇರೆ ಬೇರೆ ಆಡಳಿತ ವಿಭಾಗಗಳಲ್ಲಿ ಹಂಚಿಹೋಗಿತ್ತು. ಮುಂಬಯಿ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಮದರಾಸ್ ಅಧಿಪತ್ಯ, ಮೈಸೂರು ಸಂಸ್ಥಾನ, ಕೊಡಗು ಇತ್ಯಾದಿಯಾಗಿ ಹರಿದು ಹಂಚಿಹೋಗಿದ್ದ ಕರ್ನಾಟಕವನ್ನು ಒಂದುಗೂಡಿಸಲು 1884ರಿಂದಲೂ ನಡೆದ ಪ್ರಯತ್ನಕ್ಕೆ 1905ರ ನಂತರ ಖಚಿತ ಸ್ವರೂಪ ಸಿಕ್ಕಿ 1947ರ ವೇಳೆಗೆ ಉಗ್ರ ಹೋರಾಟ ನಡೆದಿತ್ತು. ಅನೇಕ ಹಿರಿಯರು ಕರ್ನಾಟಕ ಏಕೀಕರಣಕ್ಕೆ ಶ್ರಮಿಸಿದರು. ಅವರೆಲ್ಲರ ಶ್ರಮದ ಫಲವಾಗಿ 1956ರ ನವೆಂಬರ್ 1 ರಂದು ಮೈಸೂರು ರಾಜ್ಯ ನಿರ್ಮಾಣವಾಯಿತು. ಹರಿದು ಹಂಚಿಹೋಗಿದ್ದ ಕರ್ನಾಟಕವು ಒಂದೇ ಆಡಳಿತದಡಿ ಸೇರಿತು. ಒಗ್ಗೂಡಿದ ಕರ್ನಾಟಕಸ್ಥರು ತಮ್ಮ ರಾಜ್ಯಕ್ಕೆ 1973ರಲ್ಲಿ ಕರ್ನಾಟಕ ಎಂಬ ಹೆಸರನ್ನು ಪಡೆದರು.