ವಿಶೇಷ ಸೂಚನೆ

ಪ್ರಮುಖ ಸಾಹಿತಿಗಳ ಸಮಗ್ರ ಸಂಪುಟ

ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಕನ್ನಡ ಸಾಹಿತ್ಯ ಲೋಕದ ಹಿರಿಯ ಕವಿಗಳು ಹಾಗೂ ಸಾಹಿತಿಗಳ ಸಮಗ್ರ ಸಾಹಿತ್ಯವನ್ನು ಹಂತ ಹಂತವಾಗಿ ಸಂಪುಟವಾರು ಕಾರ್ಯರೂಪಕ್ಕೆ ತರುತ್ತಿದೆ. ಒಬ್ಬ ಸಾಹಿತಿ/ ಕವಿಯ ಒಟ್ಟು ಸಾಹಿತ್ಯ ಓದುಗರಿಗೆ ದೊರೆಯಲಿ ಎಂಬುದು ಹಾಗೂ ಅಧ್ಯಯನ ಮತ್ತು ಸಂಶೋಧನೆಗೆ ಸಹಾಯಕವಾಗುತ್ತದೆ ಎಂಬುದು ಈ ಯೋಜನೆಯ ಆಶಯವಾಗಿರುತ್ತದೆ.