ವಿಶೇಷ ಸೂಚನೆ

ಜಯಂತಿ/ಶತಮಾನೋತ್ಸವಗಳು

ಜಯಂತಿ/ಶತಮಾನೋತ್ಸವಗಳು

ನಾಡಿನ ಸಾಹಿತ್ಯ-ಸಂಸ್ಕೃತಿ ಮತ್ತು ಸಮಾಜವನ್ನು ಪ್ರಭಾವಿತಗೊಳಿಸಿದ ಹಿರಿಯರ ಚಿಂತನೆ, ಬದುಕು-ಸಾಧನೆಗಳನ್ನು ಪುನರವಲೋಕಿಸಿ, ಅವರ ಮೌಲ್ಯಗಳನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ ಸದುದ್ದೇಶದಿಂದ ಸಾಧಕರ ಹುಟ್ಟಿದ ದಿನಗಳಂದು ಅವರ ಬದುಕು-ಸಾಧನೆಗಳ ಅವಲೋಕನ ನಡೆಸುವ ಕ್ರಿಯಾತ್ಮಕ ಕಾರ್ಯಕ್ರಮಗಳ ಮೂಲಕ ಜಯಂತ್ಯುತ್ಸವಗಳನ್ನು ಆಯೋಜಿಸಲಾಗುತ್ತಿದೆ.

ಬಸವ ಜಯಂತಿ, ಕನಕ ಜಯಂತಿ, ಶಿವಯೋಗಿ ಸಿದ್ದರಾಮ ಜಯಂತಿ, ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ, ಶಂಕರ ಜಯಂತಿ, ಅಂಬಿಗರ ಚೌಡಯ್ಯ ಜಯಂತಿ, ಸರ್ವಜ್ಞ ಜಯಂತಿ, ಹೀಗೆ ನಾಡು-ನುಡಿಯನ್ನು ಪ್ರಭಾವಿಸಿದ ಮಹನೀಯರ ಚಿಂತೆನಗಳ ಅವಲೋಕನ ಮತ್ತು ಪುನರ್ ಮನನದ ಸದಾಶಯದಿಂದ ಜಯಂತಿಗಳನ್ನು ಆಯೋಜಿಸಲಾಗುತ್ತಿದೆ.