ವಿಶೇಷ ಸೂಚನೆ

ವೆಬ್ ಸೈಟ್ ಸಹಯೋಗ

ಅಕಾಡೆಮಿಗಳು:

ಸರ್ಕಾರವು ಕನ್ನಡ ನಾಡು, ನುಡಿ, ಸಂಸ್ಕøತಿ, ಸಾಹಿತ್ಯ, ಸಂಗೀತ ನೃತ್ಯ, ಲಲಿತಕಲಾ, ಜಾನಪದ, ನಾಟಕ, ಯಕ್ಷಗಾನ ಬಯಲಾಟ, ಶಿಲ್ಪಕಲಾ ಮುಂತಾದ ವೈವಿದ್ಯಮಯ ಸಾಂಸ್ಕøತಿಕ ಪರ ಸಾಂಸ್ಕøತಿಕ ಕ್ಷೇತ್ರದ ಕಾರ್ಯಗಳನ್ನು ಉಳಿಸಿ ಬೆಳೆಸುವ ಉದ್ದೇಶವನ್ನು ಇಟ್ಟುಕೊಂಡು ಆಯಾ ಕ್ಷೇತ್ರಕ್ಕೆ ಅನುಗುಣವಾಗಿ ಅಕಾಡೆಮಿಗಳನ್ನು ಸ್ಥಾಪಿಸಿರುತ್ತದೆ. ಇವು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಆಡಳಿತ ವ್ಯಾಪ್ತಿಗೆ ಒಳಪಟ್ಟಿದ್ದು, ಆಯಾ ಅಕಾಡೆಮಿಗಳು ನಿರಂತರವಾಗಿ ಕಾರ್ಯಚಟುವಟಿಕೆಗಳನ್ನು ಅನುಷ್ಠಾನಗೊಳಿಸುತ್ತಾ ಬರುತ್ತಿದೆ.

ಕನ್ನಡ ಸಂಸ್ಕøತಿ ಇಲಾಖೆ ವ್ಯಾಪ್ತಿಗೆ ಬರುವ ರಾಜ್ಯದ 12 ಅಕಾಡೆಮಿಗಳ ವಿವರ.

•    ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು. www.karnatakasahityaacademy.org
•    ಕರ್ನಾಟಕ ಜಾನಪದ ಅಕಾಡೆಮಿ, ಬೆಂಗಳೂರು. This email address is being protected from spambots. You need JavaScript enabled to view it.
•    ಕರ್ನಾಟಕ ಲಲಿತಕಲಾ ಅಕಾಡೆಮಿ, ಬೆಂಗಳೂರು. www.karnatakalalithakalaacademy.org
•    ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು. www.kannadarangabhoomi.org
•    ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಬೆಂಗಳೂರು. www.karnatakasangeetanrithyaacademy.org
•    ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ, ಬೆಂಗಳೂರು. This email address is being protected from spambots. You need JavaScript enabled to view it.
•    ಕರ್ನಾಟಕ ಶಿಲ್ಪಕಲಾ ಅಕಾಡೆಮಿ, ಬೆಂಗಳೂರು. www.shilpakalaacademy.org
•    ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು. www.tuluacademy.org
•    ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಮಂಗಳೂರು. www.konkaniacademy.org
•    ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ಮಂಗಳೂರು. www.karnatakaberysahityaacademy.org
•    ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಮಡಿಕೇರಿ. www.kodavaacademy.org
•    ಕರ್ನಾಟಕ ಅರೆಭಾಷೆ ಸಂಸ್ಕøತಿ ಹಾಗೂ ಸಾಹಿತ್ಯ ಅಕಾಡೆಮಿ, ಮಡಿಕೇರಿ. www.arebhasheacademy.com


ಪ್ರಾಧಿಕಾರಗಳು:

ಲೇಖಕ, ಓದುಗ, ಬರಹಗಾರ, ಮುದ್ರಕರ ನಡುವೆ ಸಾಹಿತ್ಯಾತ್ಮಕ ಸಂಬಂಧವನ್ನು ಬೆಸೆಯುವ, ಜಗತ್ತಿನ ಅಮೂಲ್ಯ ಸಾಹಿತ್ಯ, ಸಾಹಿತ್ಯ ಕೃತಿಗಳನ್ನು ಕನ್ನಡಕ್ಕೆ ತರ್ಜುಮೆ ಮಾಡುವ ಉದ್ದೇಶದಿಂದ ಹಾಗೂ ಕಲಾವಿದರಿಗೆ, ಕಲಾಸಂಸ್ಥೆಗಳಿಗೆ, (ಗಡಿಭಾಗಗಳು ಸೇರಿದಂತೆ) ಸಂಘ ಸಂಸ್ಥೆಗಳಿಗೆ, ಸಾಂಸ್ಕøತಿಕ ಕಾರ್ಯಕ್ರಮ, ಸಾಂಸ್ಕøತಿಕ ಭವನ ನಿರ್ಮಾಣ ಯೋಜನೆಗಳಿಗೆ ಪ್ರೋತ್ಸಾಹ ಧನ ನೀಡುವ ಸದುದ್ದೇಶದಿಂದ ಪ್ರಾಧಿಕಾರಗಳು ಸ್ಥಾಪಿತಗೊಂಡಿರುತ್ತದೆ.

ಕನ್ನಡ ಮತ್ತು ಸಂಸ್ಕøತಿ ಇಲಾಖೆ ವ್ಯಾಪ್ತಿಯಲ್ಲಿ ಈ ಕೆಳಕಂಡ ಪ್ರಾಧಿಕಾರಗಳು ಕಾರ್ಯನಿರ್ವಹಿಸುತ್ತಿವೆ.
•    ಕನ್ನಡ ಪುಸ್ತಕ ಪ್ರಾದಿಕಾರ, ಬೆಂಗಳೂರು. www.kannadapustakapradhikara.com
•    ಕುವೆಂಪು ಭಾಷಾ ಭಾರತಿ ಪ್ರಾದಿಕಾರ, ಬೆಂಗಳೂರು. www.kuvempubhashabharathi.org
•    ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ www.saintpoet.kanaka.in
•    ಕನ್ನಡ ಅಭಿವೃದ್ಧಿ ಪ್ರಾದಿಕಾರ, ಬೆಂಗಳೂರು.
•    ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು.


ರಂಗಾಯಣಗಳು

ಕನ್ನಡ ಮತ್ತು ಸಂಸ್ಕøತಿ ಇಲಾಖೆ ವ್ಯಾಪ್ತಿಯಲ್ಲಿ ಯುವಜನತೆಗೆ ರಂಗಭೂಮಿಯಲ್ಲಿ ತರಬೇತಿ ನೀಡುವ ಸಲುವಾಗಿ ಮೈಸೂರಿನಲ್ಲಿ 25ವರ್ಷಗಳ ಹಿಂದೆ ಸ್ಥಾಪಿಸಿದ ರಂಗಾಯಣವು ಇಂದು ರಾಜ್ಯದ ಅತ್ಯುತ್ತಮ ರಂಗ ಕೇಂದ್ರವಾಗಿ ಬೆಳೆದಿದೆ. ಇದೀಗ ರಾಜ್ಯದ ಎಲ್ಲಾ ವಿಭಾಗಗಳಲ್ಲಿ ಪ್ರಾದೇಶಿಕ ಹಿನ್ನೆಲೆಯಲ್ಲಿ ರಂಗಚಟುವಟಿಕೆ ಪ್ರೋತ್ಸಾಹಿಸಲು 1. ಕರ್ನಾಟಕ ನಾಟಕ ರಂಗಾಯಣ, ಧಾರವಾಡ, 2. ಕರ್ನಾಟಕ ನಾಟಕ ರಂಗಾಯಣ, ಶಿವಮೊಗ್ಗ 3. ಕರ್ನಾಟಕ ನಾಟಕ ರಂಗಾಯಣ, ಗುಲಬರ್ಗಾ ರಂಗಾಯಣಗಳನ್ನು ಸ್ಥಾಪಿಸಲಾಗಿದೆ. ಮೈಸೂರು ರಂಗಯಣದ ನಿರ್ದೇಶಕರಾಗಿ ನಾಟಕಕಾರರಾದ ಶ್ರೀ ಜನಾರ್ಧನ(ಜನ್ನಿ) ಕಾರ್ಯನಿರ್ವಹಿಸುತ್ತಿದ್ದಾರೆ.


ಟ್ರಸ್ಟ್/ಪ್ರತಿಷ್ಠಾನಗಳ ವಿವರ
ಕನ್ನಡ ಭಾಷಾ ಸಂಸ್ಕøತಿಗೆ ವಿಷೇಶ ಕೊಡುಗೆ ನೀಡಿದ ಸಾಹಿತಿ ಕಲಾವಿದರ ಕೃತಿಗಳ ಪ್ರಕಟಣೆ ಸಂಶೋಧನ ಹಾಗೂ ಅವುಗಳ ಸಂರಕ್ಷನೆ ಮಾಡುವುದಕ್ಕಗಿ ಆವರ ಹೆಸರಿನಲ್ಲಿ ಟ್ರಸ್ಟ್/ಪ್ರತಿಷ್ಠಾನಗಳನ್ನು ರಚಿಸಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.

1.    ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಧಾರವಾಡ
2.    ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಶಿವಮೊಗ್ಗ
3.    ಡಾ|| ಪು.ತಿ.ನ ಗ್ರಂಥಾಲಯ ಮತ್ತು ಸಂಶೋಧನಾ ಕೇಂದ್ರ, ಬೆಂಗಳೂರು
4.    ಮಲ್ಲಿಕಾರ್ಜುನ ಮನ್ಸೂರ್ ಟ್ರಸ್ಟ್, ಧಾರವಾಡ
5.    ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್, ಕೋಲಾರ
6.    ಡಾ|| ಶಿವರಾಮ ಕಾರಂತರ ಟ್ರಸ್ಟ್, ದ.ಕ. ಹಾಗೂ ಉಡುಪಿ ಕಾರ್ಯಚಟುವಟಿಕೆಗಳಿಗೆ.
7.    ಆಲೂರು ವೆಂಕಟರಾವ್ ಟ್ರಸ್ಟ್, ಧಾರವಾಡ ಕಾರ್ಯಚಟುವಟಿಕೆಗೆ
8.    ಡಾ|| ಬಸವರಾಜ ರಾಜಗುರು ಟ್ರಸ್ಟ್, ಧಾರವಾಡ ಕಾರ್ಯಚಟುವಟಿಕೆಗೆ
9.    ಡಾ|| ವಿ.ಕೃ.ಗೋಕಾಕ ಪ್ರತಿಷ್ಠಾನ, ಹಾವೇರಿ, ಕಾರ್ಯಚಟುವಟಿಕೆಗೆ
10.    ಡಾ|| ಡಿ.ವಿ.ಜಿ. ಪ್ರತಿಷ್ಠಾನ, ಕೋಲಾರ ಕಾರ್ಯಚಟುವಟಿಕೆಗೆ
11.    ನಿಜಲಿಂಗಪ್ಪ ಟ್ರಸ್ಟ್, ಚಿತ್ರದುರ್ಗ ಕಾರ್ಯಚಟುವಟಿಕೆಗೆ
12.    ಮೈಲಾರ ಮಹಾದೇವ ಟ್ರಸ್ಟ್, ಹಾವೇರಿ
13.    ಡಾ|| ಗುಬ್ಬಿ ವೀರಣ್ಣ ಟ್ರಸ್ಟ್, ತುಮಕೂರು
14.    ಶ್ರೀ ಬೆಟಗೇರಿ ಕೃಷ್ಣಶರ್ಮ ಟ್ರಸ್ಟ್, ಬೆಳಗಾವಿ
15.    ರನ್ನ ಪ್ರತಿಷ್ಠಾನ, ಮುಧೋಳ, ಬಾಗಲಕೋಟೆ
16.    ಬಸವರಾಜ ಕಟ್ಟೀಮನಿ ಪ್ರತಿಷ್ಠಾನ, ಬೆಳಗಾವಿ
17.    ಶ್ರೀ ಡಿ.ವಿ.ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಧಾರವಾಡ
18.    ಅಲಸಂಗಿ ಗೆಳೆಯರ ಟ್ರಸ್ಟ್
19.    ದುತ್ತರಗಿ ಪ್ರತಿಷ್ಠಾನ
20.    ಗಳಗನಾಥರ ಪ್ರತಿಷ್ಠಾನ