ವಿಶೇಷ ಸೂಚನೆ

ಶ್ರೀಮತಿ ಕೆ. ವೆಂಕಟಲಕ್ಷ್ಮಮ್ಮ

ನೃತ್ಯ ಹಾಗೂ ಸಂಗೀತ ಕ್ಷೇತ್ರದ ಜನಪ್ರಿಯ ಹಿರಿಯ ಕಲಾವಿದ ಶ್ರೀಮತಿ ಕೆ. ವೆಂಕಟಲಕ್ಷ್ಮಮ್ಮ. ಇವರು ಕಡೂರು ತಾಲೂಕಿನ ತಾಂಡ್ಯದ ಬಣಚಾರ್ ಜನಾಂಗದಲ್ಲಿ ೧೯೦೬ರಲ್ಲಿ ಜನಿಸಿದರು.

ವಿದ್ಯಾಭ್ಯಾಸದ ಸಲುವಾಗಿ ಇವರ ಹಿರಿಯರು ಇವರನ್ನು ಮೈಸೂರಿಗೆ ಕರೆ ತಂದರು.ನಾಟ್ಯ ಸರಸ್ವತಿಯೆಂದೇ ಹೆಸರಾಗಿದ್ದ ಜಟ್ಟಿತಾಯಮ್ಮನವರಲ್ಲಿ ಸತತ ೨೦ ವರ್ಷಗಳ ಕಾಲ ನೃತ್ಯಾಭ್ಯಾಸ ನಡೆಸಿ ಪರಿಪೂರ್ಣ ನೃತ್ಯಕಲಾವಿದೆಯಾಗಿ ಅರಳಿದರು. ತಮ್ಮ ಗುರುಗಳ ನೇತೃತ್ವದಲ್ಲಿಯೇ ಅನೇಕ ಕಾರ್ಯಕ್ರಮಗಳನ್ನು ನೀಡಿ ವಿದ್ವಾಂಸರ ಪ್ರಂಶಸೆಗೆ ಪಾತ್ರರಾದರು.ಸಂಗೀತದ ನಾದ ಇವರನ್ನು ಮೋಡಿ ಮಾಡಿದ್ದರಿಂದ, ಆಸ್ಥಾನ ವಿದ್ವಾನ್ ಬಿ. ದೇವೇಂದ್ರಪ್ಪನವರಲ್ಲಿಯೂ ಹಾಗೂ ಚಿಕ್ಕರಾಮರಾಯರಲ್ಲಿಯೂ ಸಂಗೀತಾಭ್ಯಾಸ ಮಾಡಿದರು. ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಅವರ ಆಸ್ಥಾನ ವಿದುಷಿಯಾಗಿ ಸುಮಾರು ೨೦ ವರ್ಷಗಳ ಕಾಲ ಸೇವೆ ಸಲ್ಲಿಸಿದರು.

ವೆಂಕಟಲಕ್ಷ್ಮಮ್ಮನವರು ಶಾಸ್ತ್ರೀಯವಾದ ಮೈಸೂರು ಸಂಪ್ರದಾಯದ ಭರತನಾಟ್ಯ ಶಿಕ್ಷಣವನ್ನು ನೀಡುವ ಸಲುವಾಗಿ ೧೯೫೪ರಲ್ಲಿ ಭರತ ಕಲಾನಿಕೇತನವೆಂಬ ಸಂಸ್ಥೆಯನ್ನು ಮೈಸೂರಿನಲ್ಲಿ ಸ್ಥಾಪಿಸಿ, ಸುಮಾರು ೧೨ವರ್ಷಗಳ ಕಾಲ ಅದರ ಪ್ರಿನ್ಸಿಪಾಲರಾಗಿ ದುಡಿದರು. ೧೯೬೫ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಲಲಿತಕಲೆಗಳ ಕಾಲೇಜನ್ನು ಆರಂಭಿಸಿದಾಗ ಇವರನ್ನು ನೃತ್ಯ ವಿಭಾಗದ ಉಪಪ್ರಾಧ್ಯಾಪಕರಾಗಿ ನೇಮಿಸಿತು. ಇಲ್ಲಿ ೯ ವರ್ಷಗಳ ಕಾಲ ಸೇವೆ ಸಲ್ಲಿಸಿದರಲ್ಲದೆ, ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

ವೆಂಕಟಲಕ್ಷ್ಮಮ್ಮನವರ ಸಂಗೀತ - ನೃತ್ಯ ಸಾಧನೆ ಹಾಗೂ ಆ ಕ್ಷೇತ್ರಕ್ಕೆ ಅವರು ಸಲ್ಲಿಸಿದ ಅಪಾರ ಸೇವೆಯ ಪರಿಣಾಮ, ಅನೇಕ ಪ್ರಶಸ್ತಿ - ಗೌರವಗಳು ಅವರನ್ನರಿಸಿಕೊಂಡು ಬಂದಿವೆ. ಅವುಗಳಲ್ಲಿ ೧೯೬೨ - ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ೧೯೬೪ - ರಾಷ್ಟ್ರೀಯ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಬೆಂಗಳೂರು ಗಾನಕಲಾ ಪರಿಷತ್ತಿನ ಗೌರವ ಪದವಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಭಿನಯ ಶಾರದೆ ಬಿರುದು, ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಹಾಗೂ ನಾಟ್ಯಕ್ಕಾಗಿ ಶಾಂತಲಾ ಪ್ರಶಸ್ತಿ ಪ್ರಮುಖವಾದುವು.

ಅಬ್ಬಕ್ಕ ಉತ್ಸವ

ಜಿಲ್ಲೆ   : ದಕ್ಷಿಣ ಕನ್ನಡ

ಉತ್ಸವದ ಹೆಸರು    :  ಅಬ್ಬಕ್ಕ ಉತ್ಸವ

ಇತಿಹಾಸ     :

16ನೆಯ ಶತಮಾನದಲ್ಲಿ ದಕಿಣ ಕನ್ನಡ ಜಿಲ್ಲೆಯನ್ನು ಆಳುತ್ತಿದ್ದ ಬುಕ್ಕಾದೇವಿ ಪೋರ್ಚುಗೀಸರ ಮೇಲೆ ನಿರಂತರ ದಾಳಿಯನ್ನು ಎದುರಿಸಿ, ಮಲಬಾರಿನ ಅರಸರ ಜೊತೆ ಸ್ನೇಹ ಸಂಪಾದಿಸಿ ಪೋರ್ಸುಗೀಸರನ್ನು ಹಿಂದಕ್ಕಟ್ಟಿದ್ದರು. ಪೋರ್ಚುಗೀಸ್ ನೌಕಾಧಿಕಾರಿ ದೋಮ್ ಆಲ್ವಾರೆಸ್ ದ ಸಿಲ್ವೀರಾ, 21 ಹಡಗುಗಳಲ್ಲಿ ಆಗಮಿಸಿ ದಾಳಿ ಮಾಡಿದನು. 

ಸಾಮಾಜಿಕ ಪ್ರಸ್ಥುತತೆ    :

ಒಬ್ಬ ಮಹಿಳೆಯಾಗಿ ನಾಡಿನ ಚುಕ್ಕಾಣಿ ಹಿಡಿದು ರಾಷ್ಟ್ರದ ಸಾರ್ವಭೌಮತ್ವೆ ಮತ್ತು ಸ್ವಾತಂತ್ರವನ್ನು ಕಾಪಾಡಿದ ಧೀರೋದಾತ್ತ ಮಹಿಳೆಯ ಚರಿತ್ರೆಯನ್ನು ಯುವಜನತೆಗೆ ನೆಪಿಸುವ ಸದಾಶಯದಿಂದ ಉತ್ಸವ ಆಚರಿಸಲಾಗುತ್ತಿದೆ.

ಆಚರಣೆಯ ಬಗೆ    :

ಸಾಂಸ್ಕೃತಿಕ ಮತ್ತು ಸಾಮಾಜಿಕ ಕೊಡುಗೆಯ  ಮಹತ್ವವನ್ನು ಸಾಮರ್ಥ್ಯವಾಗಿ ಬಿಂಬಿಸುವ ಉತ್ಸವವನ್ನು ಅತ್ಯಂತ ಅರ್ಥಪುರ್ಣ ಹಾಗೂ ವರ್ಣರಂಜಿತವಾಗಿ  ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವ ಮೂಲಕ  ಉತ್ಸವವನ್ನು ಯಶಸ್ವಿಯಾಗಿ ಆಚರಿಸಲಾಗುತ್ತಿದೆ.

ತಲುಪುವ ಬಗೆ    :

ಮಂಗಳೂರಲ್ಲಿ   ವಿಮಾನ ನಿಲ್ದಾಣ ಇದ್ದು, ರಾಷ್ಟ್ರೀಯ ಹೆದ್ದಾರಿ ಮೂಲಕ ರಸ್ತೆ ಹಾಗೂ ರೈಲು ಮೂಲಕ ತಲುಪಬಹುದಾಗಿದೆ. ವಸತಿ ಸೌಲಭ್ಯ ಲಭ್ಯವಿದೆ.


ಚಿತ್ರಗಳು/ ವೆಬ್ ಸೈಟ್ ಲಿಂಕ್  :

ಕೆ. ವೆಂಕಟಪ್ಪ

ಕಲೆಗಾಗಿಯೇ ಇಡೀ ಬದುಕನ್ನು ಸವೆಸಿ, ಜೀವನದ ಪ್ರತಿಗಳಿಗೆಯೂ ಕಲೆಯ ಗುಂಗಿನಲ್ಲೆ ಕಳೆದು, ಕಲೆಗೆ ದುಡಿಯಲೆಂದೇ ಒಂಟಿಯಾಗಿ ಉಳಿದು, ಚಿತ್ರಕಲೆಯ ತಮ್ಮ ಅದ್ಭುತ ಪ್ರತಿಭೆಯಿಂದ ಕರ್ನಾಟಕಕ್ಕೆ ಕೀರ್ತಿತಂದ ಕಲಾ ತಪಸ್ವಿ ವೆಂಕಟಪ್ಪನವರು ಜನಿಸಿದ್ದು, ೧೮೮೬ರಲ್ಲಿ.

ವೆಂಕಟಪ್ಪನವರ ಪೂರ್ವಿಕರು ಚಿತ್ರಕಲೆಯಲ್ಲಿ ಪ್ರಸಿದ್ಧಿ ಪಡೆದಿದ್ದರು. ತಂದೆ ಕೃಷ್ಣಪ್ಪನವರು ಸಹ ನಾಲ್ವಡಿ ಕೃಷ್ಣರಾಜ ಒಡೆಯರ ಆಸ್ಥಾನ ಕಲಾವಿದರು. ಹೀಗಾಗಿ ಬಾಲಕ ವೆಂಕಟಪ್ಪನಿಗೆ ಸಹಜವಾಗಿಯೇ ಚಿಕ್ಕಂದಿನಲ್ಲಿ ಕಲಾಸಕ್ತಿ ಮೂಡಿತು. ಬಾಲಕ ವೆಂಕಟಪ್ಪನ ಸಿಂಹ ಸಿಂಹಿಣಿ ಕಲಾಕೃತಿ ಮಹಾರಾಜರ ಮೆಚ್ಚುಗೆಗೆ ಪಾತ್ರವಾದ್ದರಿಂದ, ವೆಂಕಟಪ್ಪನ ಕಲಾಭ್ಯಾಸಕ್ಕೆ ಮಹಾರಾಜರು ಅನುಕೂಲ ಮಾಡಿಕೊಟ್ಟರು. ಮದ್ರಾಸಿನ ಕಲಾಶಾಲೆಯಲ್ಲಿ ಉನ್ನತ ಶ್ರೇಣಿಯಲ್ಲಿ ಡಿಪ್ಲೋಮಾ ಪಾಸು ಮಾಡಿದ ವೆಂಕಟಪ್ಪನವರು ಉನ್ನತ ಶಿಕ್ಷಣಕ್ಕಾಗಿ ಕಲ್ಕತ್ತಾದ ಪರ್ಸಿಬ್ರೌನ ಹಾಗೂ ಅವನೀಂದ್ರನಾಥ � ಾಗೂರ್ರಲ್ಲಿಗೆ ಹೋದರು. ಈ ಅವಧಿಯಲ್ಲಿಯೇ ವೆಂಕಟಪ್ಪನವರ ಅಜಂತ ಚಿತ್ರಗಳು ಪುಸ್ತಕ ರೂಪದಲ್ಲಿ ಪ್ರಕಟವಾಗಿ, ಅವರ ಕೀರ್ತಿ ದೇಶ - ವಿದೇಶಗಳಲ್ಲಿ ಹರಡಿತು.

೧೯೨೦ರಲ್ಲಿ ಮೈಸೂರಿಗೆ ಹಿಂದುರಿಗಿದ ವೆಂಕಟಪ್ಪನವರು ಸ್ಟುಡಿಯೋ ಆರಂಭಿಸಿ, ರಾಮಾಯಣ, ಮಹಾಭಾರತದ ಕಥಾವಸ್ತುಗಳನ್ನೊಳಗೊಂಡ ಚಿತ್ರಗಳು, ಹಾಗೂ ಐತಿಹಾಸಿಕ ಮಹಾಪುರುಷರಾದ ಶಂಕರಾಚಾರ್ಯ, ಬುದ್ಧ, ಟಿಪ್ಪುಸುಲ್ತಾನ್ ಹಾಗೂ ಪ್ರತಾಪಸಿಂಹ, ಅರ್ಧನಾರೀಶ್ವರ, ಬಂಗಾಳಿ ಪಕ್ಷಿ ಮುಂತಾದ ಅಪೂರ್ವ ಕಲಾಕೃತಿಗಳನ್ನು ರಚಿಸಿದರು. ವೆಂಕಟಪ್ಪನವರು ಕೇವಲ ಚಿತ್ರರಚನೆಯಲ್ಲಿ ಮಾತ್ರವಲ್ಲ ಶಿಲ್ಪದಲ್ಲೂ ಪ್ರವೀಣರಾಗಿದ್ದರು. ಬುದ್ಧನ ಮಹಾತ್ಯಾಗ, ಶಿವತಾಂಡವ, ವೀಣೆಶೇಷಣ್ಣ, ನಾಲ್ವಡಿ ಕೃಷ್ಣರಾಜ ಒಡೆಯರ ಹೀಗೆ ಅನೇಕ ಕಲಾಕೃತಿಗಳು ಇವರ ಪ್ರತಿಭೆಗೆ ಸಾಕ್ಷಿಯೆನಿಸಿವೆ.

ವೆಂಕಟಪ್ಪನವರಿಗೆ ಚಿತ್ರ, ಶಿಲ್ಪಕಲೆ ಅಷ್ಟೇಯಲ್ಲ ಸಂಗೀತದಲ್ಲೂ ಅಪಾರ ಆಸಕ್ತಿ. ಅಂತೆಯೇ ವೀಣೆ ಶೇಷಣ್ಣನವರಲ್ಲಿ ಏಳು ವರ್ಷಗಳ ಕಾಲ ವೀಣೆಯ ಅಭ್ಯಾಸ ಮಾಡಿದರಲ್ಲದೇ, ಸ್ವತಃ ಇಪ್ಪತ್ತೇರಡು ತಂತಿಗಳ ಶೃತಿವೀಣೆ ರೂಪಿಸಿದ ಹಿರಿಮೆ ಇವರದು.

ಕಲೆಯ ಸಾಧನೆಗಾಗಿ ಬ್ರಹ್ಮಚಾರಿಯಾಗಿಯೇ ಉಳಿದ ವೆಂಕಟಪ್ಪನವರು ಪ್ರಕೃತಿ ಪ್ರಿಯರು. ಭೂಮಿಯ ಏರು - ತಗ್ಗು, ಹಸಿರು ಗಿಡ-ಮರ- ಬಳ್ಳಿಗಳು, ವರ್ಣರಂಜಿತ ಆಕಾಶ, ಪ್ರಾಣಿ-ಪಕ್ಷಿ, ಹಿಮಾಲಯ ಪರ್ವತಗಳ ಮನಮೋಹಕ ದೃಶ್ಯ, ತಿಳಿನೀರಿನ ಸರೋವರ, ಸೂರ್ಯಾಸ್ತದ ರಂಗು, ಬೆಳ್ಳಿಯಂಚಿನ ಮೋಡ, ಹೀಗೆ ಇವರು ರಚಿಸಿದ ಕಲಾಕೃತಿಗಳು ಪ್ರಕೃತಿಯ ವೈಚಿತ್ರ್ಯಕ್ಕೆ ಬರೆದ ಬಾಷ್ಯಗಳೆನಿಸುತ್ತವೆ. ಪ್ರಕೃತಿಯ ಚಿತ್ರಕಲಾ ಪ್ರಪಂಚಕ್ಕೆ ಅನನ್ಯ ಕೊಡುಗೆ ನೀಡಿದ ಈ ಹಿರಿಯ ಸಾಧಕನಿಗೆ ೧೯೬೨ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿತು. ರಸಋಷಿ, ಕಲಾತಪಸ್ವಿ ವೆಂಕಟಪ್ಪ ೧೯೬೫ರಲ್ಲಿ ಕಲಾಪ್ರಪಂಚದಿಂದ ಶಾಶ್ವತವಾಗಿ ದೂರ ಸರಿದರು.

ಬೆಳವಡಿ ಉತ್ಸವ

ಜಿಲ್ಲೆ   : ಬೆಳಗಾವಿ

ಉತ್ಸವದ ಹೆಸರು    : ಬೆಳವಡಿ ಉತ್ಸವ

ಇತಿಹಾಸ     :

ಬೆಳಗಾವಿಯ ಬೈಲಹೊಂಗಲ ತಾಲೂಕಿನ ಕಿತ್ತೂರು, ಸಂಗೊಳ್ಳಿಯ ಪಕ್ಕದಲ್ಲಿರುವ  ಬೆಳವಡಿ ಕನ್ನಡ ನಾಡಿನ ವೀರವನಿತೆ ಬೆಳವಡಿ ಮಲ್ಲಮ್ಮನ ನಾಡು.  16ನೆ ಶತಮಾನದಲ್ಲಿ ಬಿಜಾಪುರದ ಸುಲ್ತÁನರ ವಿರುದ್ಧ ಬಂಡೆದ್ದು ಸ್ವತಂತ್ರವಾದ ಸಂಸ್ಥಾನ, ನಂತರ ಮರಾಠರ ದಾಳಿಗೆ ತುತ್ತಾಯಿತು. ದೇಸಾಯಿ ಈಶಪ್ರಭು ಯುದ್ಧದಲ್ಲಿ ಮರಣ ಹೊಂದಿದಾಗ ಮಲ್ಲವ್ವ ದೇಸಗತಿಗೆ ಬಂದು ಯುದ್ದದಲ್ಲಿ ಪರಾಕ್ರಮಶಾಲಿಯಾಗಿ ಕಾದಾಡಿ ಬಂಧಿತಳಾದಳು. ಶಿವಾಜಿ ಆಕೆಯನ್ನು ಗೌರವಪುರ್ಣವಾಗಿ ಬಿಡುಗಡೆಗೊಳಿಸಿ ಸತ್ಕರಿಸಿದನು. ತರುವಾಯ 360 ಗ್ರಾಮಗಳ ಬೆಳವಡಿ ಸಂಸ್ಥಾನ ಮರಾಠರ ಸಾಮಂತ ರಾಜ್ಯವಾಗಿತ್ತು.


ಧಾರ್ಮಿಕ ಪ್ರಭಾವ    :

ಶಿರಸಿಯ ಸೋಂದಾ ಅತ್ಯಂತ ಶ್ರಧ್ಧೆಯ ಧಾರ್ಮಿಕ ಕೇಂದ್ರ, ಇಲ್ಲಿನ ಮನೆತನದ ಮಗಳಾದ ಮಲ್ಲವ್ವ ಬೆಳವಡಿಯ ಈಶಪ್ರಭು ದೇಸಾಯಿಯ ಸತಿಯಾಗಿ ರಾಷ್ಟ್ರ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ಮುಡುಪಿಟ್ಟು ಕಾದಾಡಿದಳು.

ಸಾಮಾಜಿಕ ಪ್ರಸ್ಥುತತೆ    :

ಮಹಿಳಾ ಸ್ವಾತಂತ್ರ್ಯ ಮತ್ತು ಸಾಮಾಜಿಕ ಕೊಡುಗೆಯ  ಮಹತ್ವವನ್ನು ಸಾಮರ್ಥ್ಯವಾಗಿ ಬಿಂಬಿಸುವ ಉತ್ಸವವಾಗಿ, ಮತ್ತು ನಾಡು-ನುಡಿಯ ರಾಷ್ಟ್ರಪ್ರೇಮವನ್ನು ಹೆಚ್ಚಿಸುವ ಮತ್ತು ಗೌರವ ಬೆಳೆಸುವ  ಉದ್ದೇಶದಿಂದ ಉತ್ಸವವನ್ನು ಆಚರಿಸಲಾಗುತ್ತಿದೆ.

ಆಚರಣೆಯ ಬಗೆ    :

ಉತ್ಸವನ್ನು ಅತ್ಯಂತ ಅರ್ಥಪೂರ್ಣ ಹಾಗೂ ವರ್ಣರಂಜಿತವಾಗಿ  ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವ ಮೂಲಕ  ಉತ್ಸವವನ್ನು ಯಶಸ್ವಿಯಾಗಿ ಆಚರಿಸಲಾಗುತ್ತಿದೆ.

ತಲುಪುವ ಬಗೆ    :

ಬೆಳಗಾವಿಯಲ್ಲಿ   ವಿಮಾನ ನಿಲ್ದಾಣ ಇದ್ದು, ರಾಷ್ಟ್ರೀಯ ಹೆದ್ದಾರಿ ಮೂಲಕ ರಸ್ತೆ ಹಾಗೂ ರೈಲು ಮೂಲಕ ತಲುಪಬಹುದಾಗಿದೆ. ವಸತಿ ಸೌಲಭ್ಯ ಲಭ್ಯವಿದೆ.


ಚಿತ್ರಗಳು/ ವೆಬ್ ಸೈಟ್ ಲಿಂಕ್  :