ವಿಶೇಷ ಸೂಚನೆ

ಭಾಷಾಭಿವೃದ್ಧಿ ಯೋಜನೆಗಳು

11. ಕನ್ನಡ ತಂತ್ರಾಂಶ ಅಭಿವೃದ್ಧಿ

* ಡಾ|| ಕೆ.ಚಿದಾನಂದಗೌಡ, ಮಾಜಿ ಕುಲಪತಿಗಳು ಇವರ ಅಧ್ಯಕ್ಷತೆಯಲ್ಲಿ ದಿನಾಂಕ:1.12.2008 ರಲ್ಲಿ ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಿತಿಯನ್ನು ರಚಿಸಿದ್ದು, ಸದರಿ ಸಮಿತಿಯು 2010ರ ಮೇನಲ್ಲಿ ಸರ್ಕಾರಕ್ಕೆ ಸಮಗ್ರ ವರದಿಯನ್ನು ಸಲ್ಲಿಸಲಾಗಿತ್ತು. ವರದಿಯಲ್ಲಿ 10 ಅಂಶಗಳ ಅಭಿವೃದ್ದಿಗೆ ಶಿಫಾರಸು ಮಾಡಿದೆ.

* ಕನ್ನಡ ತಂತ್ರಾಂಶ ಅಭಿವೃದ್ದಿ ಸಮಿತಿಯ ಶಿಫಾರಸ್ಸುಗಳ ವರದಿಯಂತೆ ಆದ್ಯತೆಯ ಮೇರೆಗೆ ಟೆಂಡರ್ ಕರೆದು ಮಾರುತಿ ತಂತ್ರಾಂಶ ಅಭಿವೃದ್ಧಿಗಾರರು, ಹಾಸನ ಇವರಿಗೆ ಅ) ಪರಿವರ್ತಕಗಳು, ಆ) ಯೂನಿಕೋಡ್ ಫಾಂಟ್ಸ್, ಇ) ಮೊಬೈಲ್ ದೂರವಾಣಿಯಲ್ಲಿ ಕನ್ನಡ ಬಳಕೆ, ಈ) ಬ್ರೈಲ್ ತಂತ್ರಾಂಶಗಳನ್ನು ಸಿದ್ಧಪಡಿಸಲು ಸಂಸ್ಥೆಗೆ ಆದೇಶ ನೀಡಲಾಗಿದ್ದು, ಸದರಿ ನಾಲ್ಕು ಕನ್ನಡ ತಂತ್ರಾಂಶಗಳ ಬೀಟಾ ಆವೃತ್ತಿಯನ್ನು ಸಂಸ್ಥೆಯವರು ಸಿದ್ಧಪಡಿಸಿ ಇಲಾಖೆಗೆ ನೀಡಿರುತ್ತಾರೆ.

* ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಅಭಿವೃದ್ಧಿಪಡಿಸಿರುವ ಪರಿವರ್ತಕಗಳು, ಯೂನಿಕೋಡ್ ಅಕ್ಷರ ವಿನ್ಯಾಸಗಳು, ಮೊಬೈಲ್ ದೂರವಾಣಿ, ಬ್ರೈಲ್‍ಕನ್ನಡ ತಂತ್ರಾಂಶಗಳ ಬೀಟಾ ಆವೃತ್ತಿ ಸಿದ್ಧಗೊಂಡಿದ್ದು, ಸದರಿ ತಂತ್ರಾಂಶಗಳ ಬೀಟಾ ಆವೃತ್ತಿಯನ್ನು ದಿನಾಂಕ:22.01.2014ರಂದು ಮಾನ್ಯ ಮುಖ್ಯಮಂತ್ರಿಗಳಿಂದ ಲೋಕಾರ್ಪಣೆ ಗೊಳಿಸಲಾಯಿತು.

 ಕನ್ನಡ ಯೂನಿಕೋಡ್ ತಂತ್ರಾಂಶಗಳ ಬೀಟಾ ಆವೃತ್ತಿ ಕುರಿತು ಸಾರ್ವಜನಿಕರಿಂದ ಅಭಿಪ್ರಾಯ/ಅನಿಸಿಕೆಗಳನ್ನು ಪತ್ರಿಕಾ ಪ್ರಕಟಣೆ ಮೂಲಕ ಆಹ್ವಾನಿಸಲಾಗಿತ್ತು. ಅದರಂತೆ ಸಾರ್ವಜನಿಕರು ತಮ್ಮ ಅಭಿಪ್ರಾಯ ಅನಿಸಿಕೆಗಳನ್ನು ವೆಬ್‍ಸೈಟ್ ಮೂಲಕ ಕಳುಹಿಸಿದ್ದು, ಆ ಅಭಿಪ್ರಾಯ/ಅನಿಸಿಕೆಗಳ ಮಾಹಿತಿಯನ್ನು ದಿನಾಂಕ:7.3.2014ರಂದು ನಡೆದ ಸಭೆಯ ಗಮನಕ್ಕೆ ತಂದು ಸಭೆಯಲ್ಲಿ ತೀರ್ಮಾನಿಸಿದಂತೆ, ತಂತ್ರಾಂಶಗಳ ಬೀಟಾ ಆವೃತ್ತಿಯಲ್ಲಿ ಮಾಹಿತಿಯನ್ನು ಮಾರ್ಪಡಿಸಿ, ಮಾರುತಿ ತಂತ್ರಾಂಶ ಅಭಿವೃದ್ಧಿಗಾರರು, ಹಾಸನ ಇವರು ಪೂರ್ಣಾವೃತ್ತಿಯನ್ನು ಸಿದ್ಧಪಡಿಸಿರುತ್ತಾರೆ. ಸದರಿ ಅಂತಿಮ ಆವೃತ್ತಿಯನ್ನು ದಿನಾಂಕ:4.07.2014ರಂದು ವೆಬ್‍ಸೈಟ್ ತಿತಿತಿ.ಞಚಿಡಿಟಿಚಿಣಚಿಞಚಿ.gov.iಟಿ/ಞಛಿiಣನಲ್ಲಿ ಅಳವಡಿಸಲಾಗಿದೆ.

* ಮೊಬೈಲ್‍ನಲ್ಲಿ ಕನ್ನಡ ಬಳಕೆಯ ತಂತ್ರಾಂಶ: ಆ್ಯಂಡ್ರಾಯ್ಡ್ ಮೊಬೈಲ್ ದೂರವಾಣಿಗಳಿಗಾಗಿ ಯೂನಿಕೋಡ್ ಆಧಾರದ ಟಚ್‍ಸ್ಕ್ರೀನ್ ಕೀಲಿಮಣೆ ವಿನ್ಯಾಸವನ್ನು ಹೊಂದಿರುವ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಗಿದ್ದು, ಸದರಿ ತಂತ್ರಾಂಶದ ಬಳಕೆ ಮಾಡಿಕೊಂಡು ಮೊಬೈಲ್ ಸಾಧನದಲ್ಲಿ ಸಂದೇಶಗಳನ್ನು ಕನ್ನಡದಲ್ಲಿಯೂ ವಿನಿಮಯ ಮಾಡಿಕೊಳ್ಳಬಹುದಾಗಿದೆ. ಆ್ಯಂಡ್ರಾಯ್ಡ್ ಆವೃತ್ತಿ 2.3.1. ಮೇಲ್ಪಟ್ಟ ಎಲ್ಲಾ ಆವೃತ್ತಿಗಳಲ್ಲಿ ಮೊಬೈಲ್ ಆ್ಯಪ್ಸ್ ಮೂಲಕ ಕಾರ್ಯನಿರ್ವಹಿಸುತ್ತದೆ. ಮೊಬೈಲ್ ಆ್ಯಂಡ್ರಾಯ್ಡ್ ತಂತ್ರಾಂಶದ ಅಂತಿಮ ಆವೃತ್ತಿಯನ್ನು ಮಾನ್ಯ ಮುಖ್ಯಮಂತ್ರಿಗಳಿಂದ ದಿನಾಂಕ:19.07.2014ರಂದು ಬಿಡುಗಡೆಗೊಳಿಸಲಾಗಿದೆ.

* ಪ್ರಸಕ್ತ ವರ್ಷದಲ್ಲಿ ಮುಖ್ಯವಾಗಿ ಅಕ್ಷರ ಜಾಣ ಅಥವಾ ಓ.ಸಿ.ಆರ್. ಮತ್ತು ಲಿನೆಕ್ಸ್ ಆಧಾರಿತ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸುವ ಸಂಬಂಧ ಇ-ಟೆಂಡರ್ ಪ್ರಕ್ರಿಯೆಗೆ ಕ್ರಮಕೈಗೊಳ್ಳಲಾಗುತ್ತಿದೆ.

12. ಕನ್ನಡ ಶಾಸ್ತ್ರೀಯ ಭಾಷಾ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಸ್ಥಾಪನೆ

* ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಅಧ್ಯಯನ ಮತ್ತು ಸಂಶೋಧನೆಗಳನ್ನು ಕೈಗೊಳ್ಳುವ ದೃಷ್ಟಿಯಿಂದ ಬೆಂಗಳೂರಿನ ವಿಶ್ವವಿದ್ಯಾನಿಲಯದ ಆವರಣದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಕನ್ನಡ ಶಾಸ್ತ್ರೀಯ ಭಾಷಾ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಸ್ಥಾಪಿಸಿದ್ದು, ಆಡಳಿತ ಮಂಡಳಿ ಮತ್ತು ತಜ್ಞರ ಸಮಿತಿ ರಚಿಸಲಾಗಿದೆ.

* ಕನ್ನಡ ಶಾಸ್ತ್ರೀಯ ಭಾಷಾ ಅಧ್ಯಯನ ಮತ್ತು ಸಂಶೋಧನಾ ಕೇಂದ್ರಕ್ಕೆ ಆಡಳಿತಾತ್ಮಕ ಸಿಬ್ಬಂದಿಯನ್ನು ನೇಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

* ಅಲ್ಲದೆ, ಪ್ರತ್ಯೇಕವಾಗಿ ರಾಜ್ಯ ಸರ್ಕಾರದಿಂದಲೇ ಕನ್ನಡ ಶಾಸ್ತ್ರೀಯ ಭಾಷಾ ಅಧ್ಯಯನ ಕೇಂದ್ರ ತೆರೆಯಲು ಉದ್ದೇಶಿಸಿ ಇಲಾಖೆಯ ಪ್ರಸಕ್ತ ಸಾಲಿನ ಕ್ರಿಯಾಯೋಜನೆಯಲ್ಲಿ ರೂ.1.00ಕೋಟಿಗಳ ಅನುದಾನವನ್ನು ಅವಕಾಶ ಮಾಡಿಕೊಳ್ಳಲಾಗಿದೆ.