ವಿಶೇಷ ಸೂಚನೆ

ಉತ್ಸವಗಳು

ಕನ್ನಡನಾಡು ನೈಸರ್ಗಿಕವಾಗಿ ರಮಣೀಯವಾದುದು. ಶ್ರೀಮಂತ ಸಂಸ್ಕತಿಯ ಬೀಡಾದ ನಮ್ಮ ಕರ್ನಾಟಕ ರಾಜ್ಯವು ಸಾಂಸ್ಕತಿಕ, ಸಾಹಿತ್ಯಕ, ವಾಸ್ತುಶಿಲ್ಪ, ಜಾನಪದ ಇವೇ ಮುಂತಾದ ಕ್ಷೇತ್ರಗಳಲ್ಲಿ ಮೊದಲಿನಿಂದಲೂ ಖ್ಯಾತಿಯನ್ನು ಉಳಿಸಿಕೊಂಡು ಬಂದಿದೆ. ಕರ್ನಾಟಕ ರಾಜ್ಯದ ಭವ್ಯ ಪರಂಪರೆಯನ್ನು ಪ್ರತಿಬಿಂಬಿಸಿ, ಅವುಗಳು ಜನಮನದಲ್ಲಿ ಹಾಸುಹೊಕ್ಕಾಗಿ ನೆಲೆಸುವಂತಾಗಿ ಹಾಗೂ ಅವುಗಳಿಗೆ ಹೆಚ್ಚಿನ ಒತ್ತು ನೀಡಿ, ಆಯಾಯ ಕ್ಷೇತ್ರದಲ್ಲಿನ ಪರಿಣತರನ್ನು ಗುರುತಿಸಿ, ಪ್ರೋತ್ಸಾಹಿಸಿ, ಅವರಲ್ಲಿನ ನೈಪುಣ್ಯತೆಯನ್ನು ಎಲ್ಲರಿಗೂ ಹಂಚಿ ಸವಿಯುವಂತೆ ಮಾಡಿ, ಹೊಸ ಚೈತನ್ಯ ಹಾಗೂ ಸ್ಪೂತರ್ಿಯನ್ನು ಜನತೆಯಲ್ಲಿ ಮೂಡಿಸುವುದು ಹಾಗೂ ಅವರಲ್ಲಿ ಅಡಗಿರುವ ಸೂಕ್ತ ಪ್ರತಿಭೆಗಳಾದ ಕಲೆ, ಸಾಹಿತ್ಯ, ಕ್ರೀಡೆ ಮತ್ತು ಸಾಂಸ್ಕತಿಕ ಚಟುವಟಿಕೆಗಳಾದ ಸಂಗೀತ, ನೃತ್ಯ, ನಾಟಕ, ಜಾನಪದ ಕಲೆಗಳನ್ನು ಪ್ರದಶರ್ಿಸಲು ಅವಕಾಶ ನೀಡುವ ಉದ್ದೇಶದಿಂದ ರಾಜ್ಯಾದ್ಯಂತ ಅನೇಕ ಉತ್ಸವಗಳನ್ನು ಆಚರಿಸಲಾಗುತ್ತಿದೆ. ಅವುಗಳ ಸಂಕ್ಷಿಪ್ತ ವಿವರ ಇಂತಿದೆ.

ಕರ್ನಾಟಕ ರಾಜ್ಯದ ಪ್ರಮುಖ ಉತ್ಸವಗಳು ಜಿಲ್ಲಾವಾರು (ವಿವರಗಳಿಗೆ ಸಂಬಂಧಿತ ಜಿಲ್ಲೆಯನ್ನು ಒತ್ತಿ)

1. ಬಳ್ಳಾರಿ - ಹಂಪಿ ಉತ್ಸವ

2. ಬಾಗಲಕೋಟೆ - ಚಾಲುಕ್ಯ ಉತ್ಸವ

3. ಮೈಸೂರು - ದಸರಾ ಉತ್ಸವ

4. ಉತ್ತರ ಕನ್ನಡ - ಕದಂಬ ಉತ್ಸವ

5. ಬೀದರ್ - ಬೀದರ್ ಉತ್ಸವ

6. ಬೀದರ್ - ಬಸವ ಉತ್ಸವ

7. ಕೊಪ್ಪಳ - ಆನೆಗೊಂದಿ ಉತ್ಸವ

8. ಬಳ್ಳಾರಿ - ಪುರಂದರ ಉತ್ಸವ

9. ಬೆಳಗಾವಿ - ಕಿತ್ತೂರು ಉತ್ಸವ

10. ಚಿತ್ರದುರ್ಗ - ದುರ್ಗ ಉತ್ಸವ

11. ಹಾಸನ - ಹೊಯ್ಸಳ ಉತ್ಸವ

12. ಬಿಜಾಪುರ - ನವರಸ ಪುರ ಉತ್ಸವ

13. ಮಂಡ್ಯ - ಗಗನಚುಕ್ಕಿ ಜಲಪಾತ ಉತ್ಸವ

14. ಚಾಮರಾಜ ನಗರ - ಭರಚುಕ್ಕಿ ಜಲಪಾತ ಉತ್ಸವ

15. ಗದಗ - ಲಕ್ಕುಂಡಿ ಉತ್ಸವ

16. ಬಾಗಲಕೋಟೆ - ರನ್ನ ಉತ್ಸವ

17. ಬೆಳಗಾವಿ - ಬೆಳವಡಿ ಉತ್ಸವ

18. ದಕ್ಷಿಣ ಕನ್ನಡ - ಅಬ್ಬಕ್ಕ ಉತ್ಸವ

19. ಸಂಗೊಳ್ಳಿ ರಾಯಣ್ಣ ಉತ್ಸವ