ವಿಶೇಷ ಸೂಚನೆ

ವೆಬ್ ಸೈಟ್ ಮಾಹಿತಿ

ಸಾಂಸ್ಕೃತಿಕ ಭವನ

    ಸಾಂಸ್ಕೃತಿಕವಾಗಿ ಸಾಹಿತ್ಯಿಕವಾಗಿ ನಿರಂತರವಾಗಿ ಚಟುವಟಿಕೆಗಳನ್ನು ನಡೆಸಿಕೊಂಡು ಬರುವಂತಹ ಶುದ್ಧ ಸಾಹಿತ್ಯ, ಸಾಂಸ್ಕøತಿಕ ನೋಂದಾಯಿತ ಸಂಘ-ಸಂಸ್ಥೆಗಳಿಗೆ ಮಾತ್ರ ಆದ್ಯತೆ ಮೇಲೆ ಸಾಂಸ್ಕೃತಿಕ ಭವನ / ರಂಗಮಂದಿರ ನಿರ್ಮಾಣಕ್ಕೆ ಇಲಾಖೆ ನಿಯಮಾನುಸಾರ ಅನುದಾನವನ್ನು ನೀಡಿ ಪ್ರೋತ್ಸಾಹಿಸುತ್ತಿದೆ.


ಬಯಲು ರಂಗಮಂದಿರ
 
     ಸಾಂಸ್ಕೃತಿಕವಾಗಿ ಸಾಹಿತ್ಯಿಕವಾಗಿ ನಿರಂತರವಾಗಿ ಚಟುವಟಿಕೆಗಳನ್ನು ನಡೆಸಿಕೊಂಡು ಬರುವಂತಹ ಶುದ್ಧ ಸಾಹಿತ್ಯ ಸಾಂಸ್ಕೃತಿಕ ನೋಂದಾಯಿತ ಸಂಘ-ಸಂಸ್ಥೆಗಳಿಗೆ ನಿಯಮಾನುಸಾರ ಗ್ರಾಮ ಹಾಗೂ ಹೋಬಳಿ ಮಟ್ಟಗಳಲ್ಲಿ ಬಯಲು ರಂಗಮಂದಿರ ನಿರ್ಮಾಣದ ಯೋಜನೆ ಜಾರಿಯಲ್ಲಿದೆ.


ಜಿಲ್ಲಾ ರಂಗಮಂದಿರ (ಇಲಾಖಾ ವ್ಯಾಪ್ತಿಯಲ್ಲಿರುವ ರಂಗಮಂದಿರಗಳು)
1    ಮೈಸೂರು      ಕರ್ನಾಟಕ ಕಲಾಮಂದಿರ
2    ಕೋಲಾರ    ಟಿ ಚನ್ನಯ್ಯರಂಗಮಂದಿರ
3    ತುಮಕೂರು    ಗುಬ್ಬಿವೀರಣ್ಣ ರಂಗಮಂದಿರ
4    ಶಿವಮೊಗ್ಗ        ಕುವೆಂಪು ರಂಗಮಂದಿರ
5    ಚಿತ್ರದುರ್ಗ      ತ.ರಾ.ಸು. ರಂಗಮಂದಿರ
6    ಹಾಸನ         ಜಿಲ್ಲಾ ಕಲಾಭವನ
7    ಮಂಡ್ಯ          ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರ
8    ಚಿಕ್ಕಮಗಳೂರು     ಕುವೆಂಪು ಕಲಾಮಂದಿರ
9    ವಿಜಯಪುರ         ಕಂದಗಲ್ ಶ್ರೀ ಹನುಮಂತರಾಯ್ ರಂಗಮಂದಿರ.
10    ಕಾರವಾರ (ಉ.ಕ)     ಜಿಲ್ಲಾ ರಂಗಮಂದಿರ
11    ಕಲಬುರಗಿ    ಎಸ್. ಎಂ. ಪಂಡಿತ ರಂಗಮಂದಿರ.
12    ಬಳ್ಳಾರಿ             ಜೋಳದರಾಶಿ ದೊಡ್ಡನಗೌಡ ರಂಗಮಂದಿರ.  
13    ಬೆಳಗಾವಿ          ಕುಮಾರ ಗಂಧರ್ವ ಕಲಾಮಂದಿರ
14    ಧಾರವಾಡ          ಮನ್ಸೂರ ಮಲ್ಲಿಕಾರ್ಜುನ ಕಲಾಭವನ
15    ಬೀದರ್             ಜಿಲ್ಲಾ ರಂಗಮಂದಿರ.
16    ರಾಯಚೂರು    ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರ



















          

..02
-02-

      ಮೇಲ್ಕಂಡ 16 ಜಿಲ್ಲಾ ರಂಗಮಂದಿರಗಳು ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ನಿರಂತರವಾಗಿ ಉಪಯೋಗವಾಗುತ್ತಿವೆ.

ಪ್ರತಿಮೆಗಳು:

     ರಾಷ್ಟ್ರಕ್ಕೆ ಸೇವೆ ಸಲ್ಲಿಸಿದ ಗಣ್ಯ ವ್ಯಕ್ತಿಗಳ ಹಾಗೂ ಸಾಂಸ್ಕೃತಿಕವಾಗಿ ನಾಡು-ನುಡಿಗೆ ಗಣನಿಯವಾಗಿ ಸೇವೆಸಲ್ಲಿಸಿದ ಮಹನೀಯರುಗಳನ್ನು ದಿನನಿತ್ಯವು ಸ್ಮರಿಸಿಕೊಳ್ಳಲು ಅವರ ಪ್ರತಿಮೆಗಳನ್ನು ನಾಡಿನ ವಿವಿಧ ಸ್ಥಳಗಳಲ್ಲಿ ನಿರ್ಮಾಣ ಮಾಡಲಾಗಿದೆ.

ಸ್ಮಾರಕ:

      ಮಂಡ್ಯ ಜಿಲ್ಲೆಯ ಶಿವಪುರ ಸತ್ಯಾಗ್ರಹ ಸೌಧ ಹಾಗೂ ಚಿತ್ರದುರ್ಗ ಗಾಂಧಿಭವನ ಸ್ವಾತಂತ್ರ್ಯ ಸಂಗ್ರಾಮದ ಚಳುವಳಿಯ ಪ್ರತೀಕಗಳಾಗಿ ನಾಡಿನ ಜನತೆಗೆ ಹಾಗೂ ಮುಂದಿನ ಜನಾಂಗಕ್ಕೆ ಇತಿಹಾಸವನ್ನು ಸಾರುವಲ್ಲಿ ಪ್ರಮುಖ ಪಾತ್ರವÀಹಿಸಿವೆ.

    

                                              ನಿರ್ದೇಶಕರು