ವಿಶೇಷ ಸೂಚನೆ

ಸುವರ್ಣ ರಂಗ ಮಂದಿರಗಳು

ಸುವರ್ಣ ರಂಗಮಂದಿರಗಳು

ವೃತ್ತಿ ನಾಟಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರುವ ಬೆಳಗಾವಿ, ಬಿಜಾಪುರ, ಗದಗ, ಕೊಪ್ಪಳ, ರಾಯಚೂರು, ಬಳ್ಳಾರಿ ಹಾಗೂ ಬೀದರ್ ಈ ಏಳು ಕೇಂದ್ರಗಳಲ್ಲಿ ಕಡಿಮೆ ವೆಚ್ಚದಲ್ಲಿ ಸರಳ ರಂಗಮಂದಿರಗಳನ್ನು ನಿರ್ಮಾಣ ಮಾಡಲು 2006-07ನೇ ಸಾಲಿನಲ್ಲಿ ಸುವರ್ಣ ಕರ್ನಾಟಕ ಯೋಜನೆಯಡಿ ಪ್ರತಿ ಜಿಲ್ಲೆಗೆ ರೂ.25.00ಲಕ್ಷದಂತೆ ಒದಗಿಸಲಾದ ಒಟ್ಟು ರೂ.175.00 ಲಕ್ಷಗಳನ್ನು ಆಯುಕ್ತರು, ಕರ್ನಾಟಕ ಗೃಹ ಮಂಡಳಿ ಇವರಿಗೆ ಕೆಲವು ಷರತ್ತುಗಳನ್ನು ವಿಧಿಸಿ ಬಿಡುಗಡೆ ಮಾಡಲಾಗಿತ್ತು.

ದಿನಾಂಕ:16.08.2007ರಂದು ಮಾನ್ಯ ಇಲಾಖಾ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸುವರ್ಣ ರಂಗಮಂದಿರ ನಿರ್ಮಾಣ ಕುರಿತ ಪರಿಶೀಲನಾ ಸಭೆಯಲ್ಲಿ ಮೇಲ್ಕಂಡ ಏಳು ಜಿಲ್ಲೆಗಳ ಪೈಕಿ ನಿವೇಶನ ಗುರುತಿಸಲಾದ ನಾಲ್ಕು ಜಿಲ್ಲೆಗಳಲ್ಲಿ (ರಾಯಚೂರು ಜಿಲ್ಲೆ ಮಾನ್ವಿ, ಬಿಜಾಪುರ ಜಿಲ್ಲೆ ಇಂಡಿ, ಗದಗ್ ಜಿಲ್ಲೆ ಗದಗ, ಬೆಳಗಾವಿ ಜಿಲ್ಲೆ ಅಥಣಿ) ಸುವರ್ಣ ರಂಗಮಂದಿರ ನಿರ್ಮಿಸಲು ಅನುಮೋದನೆ ನೀಡಲಾಯಿತು ಹಾಗೂ ಕರ್ನಾಟಕ ಗೃಹಮಂಡಳಿಯು ಸಿದ್ಧಪಡಿಸಿದ್ದ ತಲಾ ರೂ.38.00ಲಕ್ಷಗಳ ಅಂದಾಜು ವೆಚ್ಚಕ್ಕೆ ಅಂದರೆ ನಾಲ್ಕು ಜಿಲ್ಲೆಗಳಿಗೆ ರೂ.152.00ಲಕ್ಷಗಳಿಗೆ ಅನುಮೋದನೆ ನೀಡಲಾಯಿತು. ಅಲ್ಲದೆ ಹಾಸನ ಜಿಲ್ಲೆ ಬೇಲೂರಿನಲ್ಲಿ ರೂ.42.00ಲಕ್ಷಗಳ ವೆಚ್ಚದಲ್ಲಿ ಕರ್ನಾಟಕ ಗೃಹಮಂಡಳಿಯು ಸುವರ್ಣ ರಂಗಮಂದಿರ ನಿರ್ಮಿಸಬೇಕೆಂದು ತೀರ್ಮಾನಿಸಲಾಯಿತು.

1. ಬೆಳಗಾವಿ ಜಿಲ್ಲೆ ಅಥಣಿ (9ಗುಂಟೆ)

ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಸುವರ್ಣ ರಂಗಮಂದಿರ ಕಾಮಗಾರಿಯನ್ನು ಕರ್ನಾಟಕ ಗೃಹ ಮಂಡಳಿಯ ನೇತೃತ್ವದಲ್ಲಿ ರಂಗಮಂದಿರದ ಕಾಮಗಾರಿಯು ಪೂರ್ಣಗೊಂಡಿದೆ.

2. ರಾಯಚೂರು ಜಿಲ್ಲೆ ಮಾನ್ವಿ (ವಿಸ್ತೀರ್ಣ 1 ಎಕರೆ)

ರಾಯಚೂರು ಜಿಲ್ಲೆ ಮಾನ್ವಿಯಲ್ಲಿ ಸುವರ್ಣ ರಂಗಮಂದಿರ ಕಾಮಗಾರಿಯನ್ನು ಕರ್ನಾಟಕ ಗೃಹ ಮಂಡಳಿಯ ನೇತೃತ್ವದಲ್ಲಿ ರಂಗಮಂದಿರದ ಪೂರ್ಣಗೊಂಡಿದೆ.

3. ಬಿಜಾಪುರ ಜಿಲ್ಲೆ ಇಂಡಿ (ವಿಸ್ತೀರ್ಣ 10,000 ಚ.ಅಡಿ)

ಬಿಜಾಪುರ ಜಿಲ್ಲೆಯ ಇಂಡಿಯಲ್ಲಿ ಸುವರ್ಣ ರಂಗಮಂದಿರ ಕಾಮಗಾರಿಯನ್ನು ಕರ್ನಾಟಕ ಗೃಹ ಮಂಡಳಿಯ ನೇತೃತ್ವದಲ್ಲಿ ರಂಗಮಂದಿರದ ಪೂರ್ಣಗೊಂಡಿದೆ.

4. ಗದಗ್ ಜಿಲ್ಲೆ ಗದಗ ಪಟ್ಟಣ

ಸುವರ್ಣ ರಂಗಂದಿರ ನಿರ್ಮಾಣ ಕಾಮಗಾರಿಯು ಪ್ಲಿಂತ್ ಹಂತದವರೆಗೆ ಸ್ಥಗಿತಗೊಂಡಿದ್ದು, ಈ ಕಾಮಗಾರಿಗೆ ವೆಚ್ಚಮಾಡಿದ ಮೊತ್ತ ಹಾಗೂ ಉಳಿಕೆ ಮೊತ್ತವನ್ನು ಸರ್ಕಾರಕ್ಕೆ ಜಮೆ ಮಾಡಲಾಗಿರುತ್ತದೆ.

5. ಹಾಸನ ಜಿಲ್ಲೆ ಬೇಲೂರು

ಹಾಸನ ಜಿಲ್ಲೆಯ ಬೇಲೂರಿನಲ್ಲಿ ಸುವರ್ಣ ರಂಗಮಂದಿರ ನಿರ್ಮಾಣಕ್ಕಾಗಿ ನಿವೇಶನದ ಕೊರತೆಯಿಂದಾಗಿ ಬಿಡುಗಡೆ ಮಾಡಿದ ಮೊತ್ತವನ್ನು ಸರ್ಕಾರಕ್ಕೆ ಜಮೆ ಮಾಡಲಾಗಿರುತ್ತದೆ.

6. ಮಂಡ್ಯ ಜಿಲ್ಲೆ ನಾಗಮಂಗಲ

ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಸುವರ್ಣ ರಂಗಮಂದಿರ ನಿರ್ಮಾಣಕ್ಕಾಗಿ ಸ್ಥಳ ಗುರುತಿಸಲಾಗಿದೆ. ಕಾಮಗಾರಿಯನ್ನು ಪ್ರಾರಂಭಿಸಬೇಕಿದೆ.

7. ಬಾಗಲಕೋಟೆ ಜಿಲ್ಲೆ ಇಳಕಲ್

ಬಾಗಲಕೋಟೆ ಜಿಲ್ಲೆ ಇಳಕಲ್‍ನಲ್ಲಿ ಸುವರ್ಣ ರಂಗಮಂದಿರ ಕಾಮಗಾರಿಯನ್ನು ಪ್ರಾರಂಭಿಸಬೇಕಿದೆ.