ವಿಶೇಷ ಸೂಚನೆ

ರಾಷ್ಟ್ರಕವಿ ಪುರಸ್ಕಾರ

ರಾಷ್ಟ್ರಕವಿ ಪುರಸ್ಕಾರ

ರಾಷ್ಟ್ರಕವಿ ಎಂಬ ಪುರಸ್ಕಾರವು ಗೌರವ ಪುರಸ್ಕಾರವಾಗಿದ್ದು, ಆ ಪುರಸ್ಕಾರಕ್ಕೆ ಭಾಜನರಾದ ಕವಿಯ ಜೀವಿತಾವಧಿಯವರೆಗೆ ಅವರನ್ನು ರಾಷ್ಟ್ರಕವಿ ಎಂದು ಪುರಸ್ಕರಿಸಲಾಗುವುದು. ಆಯಾ ಸಂದರ್ಭದಲ್ಲಿ ಸರ್ಕಾರಗಳು ನಗದು ಪುರಸ್ಕಾರವನ್ನು ಸಹಾ ರಾಷ್ಟ್ರಕವಿ ಪುರಸ್ಕೃತರಿಗೆ ನೀಡಿ ಗೌರವಿಸಿದೆ.

ನಾಡಿನ ಹಿರಿಯ ಕವಿಗಳಾದ ಮಂಜೇಶ್ವರ ಗೋವಿಂದ ಪೈ ಅವರು ಕರ್ನಾಟಕ ಮತ್ತು ಕೇರಳದ ಗಡಿನಾಡಿನಲ್ಲಿ ವಾಸವಾಗಿದ್ದವರು. ಮಂಜೇಶ್ವರದಲ್ಲಿ ವಾಸವಾಗಿದ್ದ ಗೋವಿಂದ ಪೈಗಳು, ಕನ್ನಡ, ತುಳು, ಮಲಯಾಳ, ಿನ್ನಿತರ ಭಾಷೆಗಳಲ್ಲಿ ಪ್ರಭುತ್ವವನ್ನು ಪಡೆದಿದ್ದರು.

ಕರ್ನಾಟಕ ಸರ್ಕಾರವು ಜ್ಞಾನಪೀಠ ಪುರಸ್ಕೃತ ಕರ್ನಾಟಕ ರತ್ನ ಕುವೆಂಪು ಅವರನ್ನು ‘ರಾಷ್ಟ್ರಕವಿ’ ಅಭಿಧಾನವನ್ನಿತ್ತು ಪುರಸ್ಕರಿಸಿತು. ಅವರ ಕಾಲಾನಂತರ ಹಿರಿಯರೂ ಸಮನ್ವಯ ಕವಿಯೂ ಆದ ಡಾ|| ಜಿ.ಎಸ್.ಶಿವರುದ್ರಪ್ಪ ಅವರನ್ನು ರಾಷ್ಟ್ರಕವಿ’ ಎಂಬ ಪುರಸ್ಕಾರವನ್ನಿತ್ತು ಗೌರವಿಸಲಾಯಿತು.