ವಿಶೇಷ ಸೂಚನೆ

ವಿಶ್ವ ಕನ್ನಡ ಸಮ್ಮೇಳನ

ವಿಶ್ವ ಕನ್ನಡ ಸಮ್ಮೇಳನ

2011ರ ಮಾರ್ಚ್ 11, 12 ಮತ್ತು 13 ರಂದು ಬೆಳಗಾವಿಯಲ್ಲಿ ವಿಶ್ವಕನ್ನಡ ಸಮ್ಮೇಳನವನ್ನು ಏರ್ಪಡಿಸಲಾಗಿದೆ. ಕಳೆದ 55 ವರ್ಷಗಳಲ್ಲಿ ರಾಜ್ಯ ವಿವಿಧ ಕ್ಷೇತ್ರಗಳಲ್ಲಿ ಸಾಧಿಸಿದ ಪ್ರಗತಿಯ ಬಗೆಗೆ ಮನನ, ಮುಂದೆ ಸಾಧಿಸಬೇಕಾದ ಕಾರ್ಯಗಳ ಬಗೆಗೆ ಚಿಂತನೆ ಹಾಗೂ ಜಾಗತೀಕರಣದ ಸವಾಲುಗಳನ್ನು ಎದುರಿಸುತ್ತಾ, ದೇಸೀಯ ಕಲೆಗಳನ್ನು ಕಾಪಾಡುವ ಉದ್ದೇಶಕ್ಕಾಗಿ ವಿಶ್ವ ಕನ್ನಡ ಸಮ್ಮೇಳನವನ್ನು ಬೆಳಗಾವಿ ಜಿಲ್ಲೆಯ ಒಂಭತ್ತು ವೇದಿಕೆಗಳಲ್ಲಿ ಆಚರಿಸಲಾಯಿತು.

ವಿಶ್ವಕನ್ನಡ ಸಮ್ಮೇಳನ ಕರ್ನಾಟಕ ರಾಜ್ಯದ ಸಾಂಸ್ಕøತಿಕ, ಸಾಮಾಜಿಕ, ಭೌಗೋಳಿಕ, ಪ್ರಾಕೃತಿಕ, ರಾಜಕೀಯ ಹಾಗೂ ತಂತ್ರಜ್ಞಾನ ಆಯಾಮಗಳಲ್ಲಿ ಒಂದು ದರ್ಶನವನ್ನು ನೀಡಿರುತ್ತದೆ. ಹೀಗಾಗಿ ವಿಶ್ವಕನ್ನಡ ಸಮ್ಮೇಳನದಲ್ಲಿ ವಿಭಿನ್ನ ಕ್ಷೇತ್ರಗಳ ಪರಿಣತರು, ಗಣ್ಯರು, ಕಲಾಭಿಮಾನಿಗಳು, ಶ್ರೀಸಾಮಾನ್ಯರು, ಹೊರನಾಡು ಹಾಗೂ ವಿದೇಶಿ ಕನ್ನಡಿಗರು ಪಾಲ್ಗೊಳ್ಳುವ ಮೂಲಕ ಇದನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ.

ವಿಶ್ವ ಕನ್ನಡ ಸಮ್ಮೇಳನದ ಸಂಭ್ರಮಾಚರಣೆಯ ಅಂಗವಾಗಿ ಕನ್ನಡದ ತೇರು, ಚಿತ್ರಕಲಾ ಶಿಬಿರ ಮತ್ತು ಶಿಲ್ಪಕಲಾ ಶಿಬಿರ, ಛಾಯಾಚಿತ್ರ ಪ್ರದರ್ಶನ, ಕವಿಗೋಷ್ಠಿ, ವಿಚಾರ ಸಂಕಿರಣ, ಜಾನಪದ ವಸ್ತು ಪ್ರದರ್ಶನ, ಜಾನಪದ ಕ್ರೀಡೆ ಹಾಗೂ ಕನ್ನಡ ನಾಡಿನ ವಿವಿಧ ಕ್ಷೇತ್ರಗಳಲ್ಲಾಗಿರುವ ಪ್ರಗತಿಯ ಆತ್ಮಾವಲೋಕನದ ಜೊತೆಗೆ ಕನ್ನಡ ಸಾಹಿತ್ಯದ ಸೃಜನಶೀಲ ಹಾಗೂ ಸೃಜನೇತರ ಪ್ರಕಾರದ 101 ಕೃತಿಗಳನ್ನು, ಮೇರುಕೃತಿಗಳ ಮರುಮುದ್ರಣ ಯೋಜನೆಯಡಿ ಪ್ರಕಟಿಸಲಾಗಿದೆ.

ವಿಶ್ವ ಕನ್ನಡ ಸಮ್ಮೇಳನದ ಲಾಂಛನವು ವರ್ಣ ಸಂಯೋಜನೆಯಿಂದ ಕೂಡಿದೆ. ಕನ್ನಡಿಗರು ಭಾವನಾತ್ಮಕವಾಗಿ ಮನಗಂಡಿರುವ ಕನ್ನಡ ಬಾವುಟವು ಹಳದಿ ಮತ್ತು ಕೆಂಪು ಬಣ್ಣವನ್ನು ಒಳಗೊಂಡಿದೆ. ಕನ್ನಡವನ್ನು ಪ್ರತಿನಿಧಿಸುವ `ಕ’ ಅಕ್ಷರದ ಹೃದಯ ಭಾಗದಲ್ಲಿ ಕರ್ನಾಟಕದ ನಕ್ಷೆಯಿದೆ. ಅಕ್ಷರದ ಶಿರೋಭಾಗದಲ್ಲಿ ವಿಶ್ವದ ಭೂಗೋಳವಿದೆ. ಹಾಗೂ `ಕ’ ಅಕ್ಷರವನ್ನು ಒಳಗೊಂಡ ವೃತ್ತವು ಕೇಸರಿ, ಬಿಳಿ ಮತ್ತು ಹಸಿರು ವರ್ಣದಿಂದ ಕೂಡಿದ್ದು, ಭಾರತ ದೇಶದ ತ್ರಿವರ್ಣ ಧ್ವಜವನ್ನು ಸಂಕೇತಿಸುತ್ತದೆ. ಅಂದರೆ ಕರ್ನಾಟಕ, ಭಾರತ ಮತ್ತು ವಿಶ್ವವನ್ನು ಈ ಲಾಂಛನವು ಪ್ರತಿನಿಧಿಸುತ್ತದೆ. ವೃತ್ತದ ಕೆಳಗಿನ ವಿನ್ಯಾಸವು ಆಲಂಕಾರಿಕ ಹಾಗೂ ಫಲಸಂಮೃದ್ಧಿಯ ಸಂಕೇತವಾದ ಹಸಿರು ಬಳ್ಳಿಯಿಂದ ಕೂಡಿದೆ. ಈ ಹಸಿರು ಬಳ್ಳಿಯ ಕೆಳಭಾಗದಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಯುವ ಸ್ಥಳ `ಬೆಳಗಾವಿ’ ಎಂಬ ಪದವನ್ನು ಬಳಸಲಾಗಿದೆ.

ಈ ಮೇಲ್ಕಂಡ ಎಲ್ಲಾ ಕಾರ್ಯಕ್ರಮಗಳನ್ನು ಆಚರಿಸಲು ಸರ್ಕಾರದ ಆದೇಶ ಸಂಖ್ಯೆ: ಕಸಂವಾಪ್ರ:481:ಕಸಧ:2010 ದಿ:24.6.2010ರಲ್ಲಿ ರೂ.10.00ಕೋಟಿಗಳಿಗೆ ಅನುಮೋದನೆ ದೊರೆತಿರುತ್ತದೆ. ಸರ್ಕಾರದ ಆದೇಶ ಸಂಖ್ಯೆ:ಕಸಂವಾಪ್ರ:418:ಕಸಧ:2010 ದಿನಾಂಕ:20.12.2010 ರಲ್ಲಿ ರೂ.6,50,00,000/- ಹಾಗೂ ಕಸಂವಾಪ್ರ:481:ಕಸಧ:2010 ದಿನಾಂಕ:18.02.2011 ರಲ್ಲಿ ರೂ.1,99,50,000/- ಒಟ್ಟಾರೆ ರೂ.8,49,50,000/-ಗಳನ್ನು ಬಿಡುಗಡೆಮಾಡಲಾಗಿರುತ್ತದೆ.