ವಿಶೇಷ ಸೂಚನೆ

ವೀಣೆ ಶೇಷಣ್ಣ

ವೀಣೆಗಾಗಿಯೇ ಜೀವನ ಮುಡಿಪಾಗಿಟ್ಟು, ತಮ್ಮ ವೀಣಾ ವಾದನದ ವೈಖರಿಯಿಂದ 'ದೊರೆಗಳ ದೊರೆ' ಎಂಬ ಕೀರ್ತಿಗೆ ಪಾತ್ರರಾದ ವೀಣೆ ಶೇಷಣ್ಣ ಶ್ರೇಷ್� ವೈಣಿಕರಲ್ಲಿ ಒಬ್ಬರು. 'ವೀಣೆಯ ಬೇಡಗಿದು ಮೈಸೂರು' ಎಂಬ ನಾಣ್ಣುಡಿಯಂತೆ, ೧೮೫೨ರಲ್ಲಿ ಮೈಸೂರಿನ ಸಂಗೀತಗಾರರ ವಂಶದಲ್ಲಿ ಜನಿಸಿದ ಶೇಷಣ್ಣನವರು "ವೀಣೆ ನುಡಿಸುವಾಗ ತಂತಿಯ ಮಿಡಿತ ಕೇಳಬಾರದು, ತಂತಿಯಿಂದ ಹೊರಹೊಮ್ಮುವ ನಾದ ಮಾತ್ರ ಕೇಳಬೇಕು" ಎಂಬ ಧೋರಣೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ತಂದೆ ಭಕ್ಷಿ ಚಿಕ್ಕರಾಮಪ್ಪನವರು ಮೈಸೂರು ಅರಮನೆಯ ಆಸ್ಥಾನ ವಿದ್ವಾಂಸರಾಗಿದ್ದರು. ಆದ್ದರಿಂದ ಶೇಷಣ್ಣನವರಿಗೆ ಸಂಗೀತದ ಓಂನಾಮ ತಂದೆಯಿಂದಲೇ ಪ್ರಾರಂಭವಾಯಿತು. ಬಾಲಕ ಶೇಷಣ್ಣನಿಗೆ ಸ್ವರ, ಲಯ, ಜ್ಞಾನದಲ್ಲಿ ಅಸಾಧಾರಣ ಪ್ರತಿಭೆ.

ಶೇಷಣ್ಣನವರು ತಮ್ಮ ಹತ್ತನೆಯ ವಯಸ್ಸಿನಲ್ಲಿಯೇ ಆಗ ಶಿವರಾತ್ರಿಯಂದು ಅರಮನೆಯಲ್ಲಿ ನಡೆಯುತ್ತಿದ್ದ ಸಂಗೀತ ಕಚೇರಿಯಲ್ಲಿ ಹಾಡಿ, ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ ಮೆಚ್ಚುಗೆಗೆ ಪಾತ್ರರಾಗಿ, ಅವರಿಂದ ಬಹುಮಾನ ಪಡೆದರು. ಮಹಾರಾಜರ ಮೆಚ್ಚುಗೆ ಶೇಷಣ್ಣನವರ ವೀಣಾವಾದನದ ಆಸಕ್ತಿಯನ್ನು ನೂರ್ಮಡಿಗೊಳಿಸಿತು. ಮುಂದೆ ಶೇಷಣ್ಣನವರು ತಮ್ಮ ಹನ್ನೆರಡನೆಯ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡು, ಅಕ್ಕ ವೆಂಕಮ್ಮನ ಆಶ್ರಯ ಪಡೆದರು. ತಮ್ಮನ ಪ್ರತಿಭೆ ಪ್ರೋತ್ಸಾಹಿಸಿದ ವೆಂಕಮ್ಮನವರು ವೀಣಾವಾದನ ಕಲಿಯಲು ದೊಡ್ಡ ಶೇಷಣ್ಣನವರಲ್ಲೂ, ಹಾಡುಗಾರಿಕೆ ಕಲಿಯಲು ಮೈಸೂರು ಸದಾಶಿವರಾಯರಲ್ಲೂ ಏರ್ಪಾಟು ಮಾಡಿದರು.

ತಮ್ಮ ೨೬ನೇ ವಯಸ್ಸಿನವರೆಗೂ ಸತತ ಸಾಧನೆ ಮಾಡಿ ಪರಿಪೂರ್ಣ ಕಲಾವಿದರಾಗಿ, ಕೊಯಮತ್ತೂರು, ತಂಜಾವೂರು, ರಾಮನಾಥಪುರ, ಹಾಗೂ ಅನೇಕ ರಾಜರ ಆಸ್ಥಾನಗಳಲ್ಲಿ ವೀಣಾವಾದನ ಕಾರ್ಯಕ್ರಮ ನೀಡಿ ಪ್ರಸಿದ್ಧಿ ಪಡೆದರು. ಅಷ್ಟೇ ಅಲ್ಲದೇ ಇವರ ವೀಣಾವಾದನವನ್ನು ಕೇಳಿ ಮೆಚ್ಚಿದ ಬರೋಡ ಮಹಾರಾಜರು ಶೇಷಣ್ಣನವರನ್ನು ಮೇನಾದಲ್ಲಿ ಕುಳ್ಳಿರಿಸಿ ಮೆರವಣಿಗೆ ಮಾಡಿ ಗೌರವಿಸಿದರು.ದೆಹಲಿಯಲ್ಲಿ ಐದನೆ ಜಾರ್ಜರ ಪಟ್ಟಾಭಿಷೇಕ ಸಂದರ್ಭದಲ್ಲಿ ವಿಶೇಷ ಆಹ್ವಾನಿತರಾಗಿ ಸಂಗೀತ ಕಾರ್ಯಕ್ರಮ ನೀಡಿದ ಹಿರಿಮೆ ಇವರದು.ಇವರ ಸಂಗೀತ ಸುಧೆಯ ಸವಿಯನ್ನುಂಡ ಚಕ್ರವರ್ತಿ ಇವರ ಭಾವಚಿತ್ರವನ್ನು ಒಯ್ದು ಬಕಿಂಗ್ಹ್ಯಾಂ ಅರಮನೆಯಲ್ಲಿಟ್ಟಿದ್ದರು.

ಶೇಷಣ್ಣನವರು ಕೇವಲ ಶ್ರೇಷ್� ವೈಣಿಕರಷ್ಟೇ ಅಲ್ಲದೆ, ಪಿಟೀಲು, ಪಿಯಾನೋ, ಸ್ವರ ಮತ್ತು, ಜಲತರಂಗ ಮೊದಲಾದ ವಾದ್ಯಗಳಲ್ಲೂ ಪ್ರವೀಣರಾಗಿದ್ದರು. ಮೈಸೂರು ಮಹಾರಾಜರಿಂದ ’ವೈಣಿಕ ಶಿಖಾಮಣಿ' ಬಿರುದು ಪಡೆದಿದ್ದ ಇವರು ವರ್ಣಕೃತಿ, ಸ್ವರಜತಿ, ತಿಲ್ಲಾನಗಳನ್ನು ಹಾಗೂ ಕೆಲವು ದೇವರನಾಮಗಳನ್ನು ರಚಿಸಿ, ಮಹಾರಾಜರಿಗೆ ಸಮರ್ಪಿಸಿದರು. ಮಹಾತ್ಮಾಗಾಂಧಿ, ಜವಾಹರಲಾಲ್ ನೆಹರೂ, ಸರ್ದಾರ್ ವಲ್ಲಭಭಾಯಿ ಪಟೇಲ್, ವಿಜಯಲಕ್ಷ್ಮಿ ಪಂಡಿತ್ ಮುಂತಾದ ರಾಷ್ಟ್ರೀಯ ನಾಯಕರ ಮೆಚ್ಚುಗೆಗೂ ಪಾತ್ರರಾಗಿದ್ದ ಶೇಷಣ್ಣನವರು, ತಮ್ಮ ಸಂಗೀತ ಸಾಧನೆಯಿಂದ ಶ್ರೇಷ್� ಶಿಷ್ಯರನ್ನು ರೂಪಿಸುವ ಮೂಲಕ ಕರ್ನಾಟಕಕ್ಕೆ ಕೀರ್ತಿ ತಂದು ೧೯೨೬ರಲ್ಲಿ ದೈವಾಧೀನರಾದರು.