ವಿಶೇಷ ಸೂಚನೆ

 

ಪ್ರಕಟಣೆಗಳು

ಕನ್ನಡ ಓದುಗರಿಗೆ ಸುಲಭ ಬೆಲೆಯಲ್ಲಿ ಉತ್ತಮ ಕೃತಿಗಳು ಲಭ್ಯವಾಗಬೇಕೆನ್ನುವ ಉದ್ದೇಶದಿಂದ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಯೋಜನೆಯಡಿ ಹಲವಾರು ಪ್ರಕಟಣಾ ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರುತ್ತಿದೆ. ಈ ಯೋಜನೆಯಡಿ ಕನ್ನಡದ ಪ್ರಮುಖ ಸಾಹಿತಿಗಳ ಸಮಗ್ರ ಸಾಹಿತ್ಯ, ಆಯ್ದ ಕೃತಿಗಳು, ಪ್ರಾತಿನಿಧಿಕ ಕೃತಿಗಳು, ವಿಶಿಷ್ಟ ಹಾಗೂ ಅಲಭ್ಯ ಕೃತಿಗಳನ್ನು ಓದುಗರಿಗೆ ಮತ್ತು ಸಾಹಿತ್ಯಾಸಕ್ತರಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.

ಯುವ ಬರಹಗಾರರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಪಿ.ಹೆಚ್.ಡಿ ಮತ್ತು ಎಂ.ಫಿಲ್ ಪದವಿ ಪಡೆದ ಪ್ರಬಂಧಗಳ ಹಸ್ತಪ್ರತಿ ಮುದ್ರಣಕ್ಕೆ ಧನಸಹಾಯ ನೀಡುವ ಯೋಜನೆಯನ್ನು ಇಲಾಖೆಯು ಹಮ್ಮಿಕೊಂಡಿದೆ. ಈ ಯೋಜನೆಯಡಿ ಎಂ.ಫಿಲ್ ಪ್ರೌಢಪ್ರಬಂಧಗಳು ಕನ್ನಡ ಮಾಧ್ಯಮದ್ದಾಗಿದ್ದು, ಯಾವುದೇ ವಿಷಯಕ್ಕೆ ಸಂಬಂಧಿಸಿದ್ದಾಗಿರಬಹುದು. ಯಾವುದೇ ವಿಶ್ವವಿದ್ಯಾಲಯಗಳಿಂದ ಕನ್ನಡ ಮಾಧ್ಯಮದಲ್ಲಿ ಪಿ.ಹೆಚ್.ಡಿ ಮತ್ತು ಎಂ.ಫಿಲ್ ಪದವಿ ಪಡೆದ ಪ್ರಬಂಧಗಳನ್ನು ಮಾತ್ರ ಪರಿಗಣಿಸಲಾಗುತ್ತದೆ.

ಬರಹಗಾರರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಸೃಜನೇತರ ಪ್ರಕಾರಕ್ಕೆ ಸೇರಿದ ಜಾನಪದ, ವೈಜ್ಞಾನಿಕ, ಐತಿಹಾಸಿಕ, ಸಾಂಸ್ಕøತಿಕ, ಪ್ರವಾಸ ಕಥನ ಮತ್ತು ವ್ಯಕ್ತಿ ವಿಶೇಷ ಕುರಿತ ಸಾಹಿತ್ಯಕ ಮೌಲ್ಯವುಳ್ಳ ವಿಮರ್ಶಾತ್ಮಕ ಗ್ರಂಥಗಳಿಗೆ ಮಾತ್ರ ಧನಸಹಾಯ ನೀಡಲಾಗುವುದು.

ವಿಶೇಷ ಘಟಕ/ಗಿರಿಜನ ಪಿಎಚ್.ಡಿ. ಪದವಿ ಪಡೆದ ಮಹಾಪ್ರಬಂಧದ ಮುದ್ರಣಕ್ಕೆ ಧನಸಹಾಯ ಅರ್ಜಿ

ಎಂ.ಫಿಲ್ ಪದವಿ ಪಡೆದ ಪ್ರಬಂಧದ ಮುದ್ರಣಕ್ಕೆ ಧನಸಹಾಯ ಅರ್ಜಿ

2015-16ನೇ ಸಾಲಿನ ಪ.ಜಾತಿ ಮತ್ತು ಪ.ಪಂಗಡದ ಚೊಚ್ಚಲ ಕೃತಿಗಾಗಿ ಧನ ಸಹಾಯ ಅರ್ಜಿ ನಮೂನೆ

ಪ್ರಕಟಿತ ಗ್ರಂಥಗಳಿಗೆ ಧನಸಹಾಯ ನೀಡುವ ಕುರಿತು ಅರ್ಜಿ ನಮೂನೆ