ವಿಶೇಷ ಸೂಚನೆ

ಸಾಹಿತ್ಯ-ಸಂಸ್ಕೃತಿ ಪ್ರಶಸ್ತಿ

ಸಾಹಿತ್ಯ-ಸಂಸ್ಕೃತಿ ಪ್ರಶಸ್ತಿ

ಪ್ರಶಸ್ತಿ-ಪುರಸ್ಕಾರಗಳು ಯಾವುದೇ ಕ್ಷೇತ್ರಗಳ ಸಾಧಕರಿಗೆ ಹೊರ ಹುರುಪು, ಪ್ರೋತ್ಸಾಹವನ್ನು ನೀಡುತ್ತದೆ. ರಾಜ್ಯ ಸರ್ಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಸಾಹಿತ್ಯ- ಸಂಸ್ಕೃತಿ, ಲಲಿತಕಲೆ, ಚಿತ್ರ ಕಲೆ, ಶಿಲ್ಪಕಲೆ, ಶಾಸ್ತ್ರೀಯ ಸಂಗೀತ, ಗಮಕ, ಸುಗಮ ಸಂಗೀತ, ನೃತ್ಯ, ಸಾಹಿತ್ಯ, ಗಡಿನಾಡು ಪ್ರದೇಶದಲ್ಲಿ ಕನ್ನಡ ಜಾಗೃತಿ, ಹವ್ಯಾಸಿ ರಂಗಭೂಮಿ, ವೃತ್ತಿ ರಂಗಭೂಮಿ, ಸಾಮಾಜಿಕ ಸಂಘಟನೆ, ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸುಮಾರು 15 ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಮತ್ತು ಎರಡು ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಸ್ಥಾಪಿಸಿದ್ದು, ಪ್ರತಿ ವರುಷ, ತಜ್ಞರ ಆಯ್ಕೆಸಮಿತಿ ಮೂಲಕ ಅರ್ಹ ಸಾಧಕರನ್ನು ಗುರುತಿಸಿ ಗೌರವಿಸಲಾಗುತ್ತಿದೆ.

ಶಸ್ತಿಗಳ ವಿವರ ಮತ್ತು ವರುಷಾವಾರು ಪ್ರಶಸ್ತಿ ಪುರಸ್ಕೃತರ ವಿವರ ಈ ಕೆಳಕಂಡಂತಿವೆ.