ವಿಶೇಷ ಸೂಚನೆ

ಗಮಕಿ ಎಂ. ರಾಘವೇಂದ್ರರಾವ್

ಗಮಕಕಲೆಗೆ ಮತ್ತು ಅದರ ಪ್ರಚಾರಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ರಾಘವೇಂದ್ರರಾವ್, ಗಮಕ ಕಲೆಯ ಹಿರಿಯ ಸಾಧಕ. ೧೯೧೪ರಲ್ಲಿ ಮೈಸೂರಿನ ನೀಲಕಂ� ಕೇಶವರಾಯರ ಹಾಗೂ ವೆಂಕಟಲಕ್ಷ ್ಮಮ್ಮ ದಂಪತಿಗಳ ಮಗನಾಗಿ ಜನಿಸಿದ ಇವರು, ಬಾಲ್ಯದಲ್ಲಿಯೇ ಗಮಕ ಕಲೆಯನ್ನು ಒಲಿಸಿಕೊಂಡರು.

ಮೈಸೂರಿನಲ್ಲಿ ನಡೆಯುತ್ತಿದ್ದ ಸಂಗೀತ - ಗಮಕ ಕಾರ್ಯಕ್ರಮಗಳಿಗೆ ಬಾಲಕ ರಾಘವೇಂದ್ರ ತಪ್ಪದೇ ಹಾಜರಾಗುತ್ತಿದ್ದ. ಜೊತೆಗೆ ಸ್ವತಃ ಗಮಕಿ ಹಾಗೂ ಸಾಹಿತ್ಯ ಪ್ರೇಮಿಯಾಗಿದ್ದ ಕೇಶವರಾವ್ರು ಬಾಲಕನ ಆಸಕ್ತಿಗೆ ನೀರೆರೆದರು. ಹುಡುಗನ ಗಮಕ ಕಲೆಯ ಆಸಕ್ತಿಗೆ ಬೆರಗಾದ ಜವಳಿ ಅಂಗಡಿ ತಮ್ಮಯ್ಯನವರು, ಬಾಲಕ ರಾಘವೇಂದ್ರನನ್ನು ಶಿಷ್ಯನನ್ನಾಗಿ ಸ್ವೀಕರಿಸಿದರು. ಆಗಿನ ಕಾಲದ ಪ್ರಸಿದ್ಧ ಗಮಕಿಗಳಾಗಿದ್ದ ಗೌರಿ ದೇವುಡು ಶಾಸ್ತ್ರಿಗಳು, ಸಂ. ಗೋ. ಬಿಂದುರಾಯರು ಹಾಗೂ ಕೃಷ್ಣಗಿರಿ ಕೃಷ್ಣರಾಯರ ಕಾವ್ಯವಾಚನವನ್ನು ಕೇಳುವ ಸೌಲಭ್ಯ ದೊರೆಕಿದ್ದು ರಾಘವೇಂದ್ರರಾಯರ ಚೈತನ್ಯಕ್ಕೆ ಅಮೃತವರ್ಷವಾದಂತಾಯಿತು.

ಮುಂದೆ ಜೀವನ ವೃತ್ತಿಯನ್ನರಿಸಿ ಬೆಂಗಳೂರಿಗೆ ಬಂದ ರಾಯರು,ತಮ್ಮ ಗಮಕಕಲೆಯನ್ನು ಮುಂದುವರೆಸಿಕೊಂಡು ಹೋಗಲು ಅಡ್ಡಿಯಾಗುತ್ತದೆಂದು, ಅನೇಕ ವೃತ್ತಿಗಳನ್ನು ಬಿಟ್ಟು ಶಿಕ್ಷಣ ಇಲಾಖೆಯಲ್ಲಿ ಗುಮಾಸ್ತರಾಗಿ ೧೯೬೯ರವರೆಗೂ ಸೇವೆ ಸಲ್ಲಿಸಿದರು. ಗಮಕ ಕಲೆಯನ್ನೇ ತಮ್ಮ ಜೀವನದ ಉಸಿರಾಗಿಸಿಕೊಂಡ ರಾಯರು ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ಅಖಂಡ ಕನರ್ಾಟಕದಲ್ಲಿ ಪ್ರವಾಸ ಮಾಡಿ, ಗಮಕ ಕಲೆಯ ಪ್ರಚಾರ ಮಾಡಿದರು. ಪರಿಷತ್ತಿನ ಗಮಕ ಶಿಕ್ಷಣ ಶಾಲೆಯ ಪ್ರಾಧ್ಯಾಪಕರಾಗಿಯೂ, ಗಮಕ ಸಮಿತಿಯ ವ್ಯವಸ್ಥಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಯುವಪೀಳಿಗೆಗ ಗಮಕ ಕಲೆ ಕಲಿಸಿಸ ಬೆಳೆಸುವ ನಿಟ್ಟಿನಲ್ಲೂ ರಾಯರಿಗೆ ಎಣೆಯಿಲ್ಲದ ಉತ್ಸಾಹ. ಗಮಕ ತರಗತಿಗಳು, ಗಮಕ ಶಿಬಿರಗಳು, ವಿಚಾರಗೋಷ್� ಿ - ಹೀಗೆ ಅವರ ಸಾಧನೆ ಅನನ್ಯ. ಅಷ್ಟೇ ಅಲ್ಲದೇ ೧೯೯೨ರಲ್ಲಿ ನಡೆದ ಅಖಿಲ ಕರ್ನಾಟಕ ತೃತೀಯ ಗಮಕ ಕಲಾ ಸಮ್ಮೇಳನದ ಅಧ್ಯಕ್ಷತೆ ವಹಿಸಿದ ಹಿರಿಮೆ ಇವರದು.