ವಿಶೇಷ ಸೂಚನೆ

ಸುವರ್ಣ ಸಾಂಸ್ಕೃತಿಕ ಸಮುಚ್ಛಯ

ಸುವರ್ಣ ಸಾಂಸ್ಕøತಿಕ ಸಮುಚ್ಚಯಗಳ ವಿವರ

ಕರ್ನಾಟಕ ರಾಜ್ಯವು ಏಕೀಕರಣಗೊಂಡು 50 ವರ್ಷಗಳು ತುಂಬಿದ ಸಂದರ್ಭದಲ್ಲಿ, ಇದರ ಅಂಗವಾಗಿ ಸರ್ಕಾರವು ವಿವಿಧ ಸ್ಮರಣೆಯ ಯೋಜನೆಗಳನ್ನು ಹಮ್ಮಿಕೊಂಡು ಅನುಷ್ಠಾನಕ್ಕೆ ತರುತ್ತಿದೆ. ಈ ಸುವರ್ಣ ಮಹೋತ್ಸವದ ಸವಿ ನೆನಪಿನಲ್ಲಿ ಕೆಲವು ಶಾಶ್ವತ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಅವುಗಳಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿನ ಕರ್ನಾಟಕ ಕಲಾಗ್ರಾಮದಲ್ಲಿ ಸುವರ್ಣ ಸಾಂಸ್ಕøತಿಕ ಸಮುಚ್ಚಯವನ್ನು ನಿರ್ಮಿಸುವುದು ಸೇರಿದೆ. ಈ ಸಮುಚ್ಚಯವು ರಾಜ್ಯದ ಎಲ್ಲ ಜಿಲ್ಲೆಗಳ ಕಲೆ ಮತ್ತು ಸಂಸ್ಕøತಿಯನ್ನು ಪ್ರತಿಬಿಂಬಿಸುವಂತಹ ವಸ್ತು ಪ್ರದರ್ಶನ, 300 ಜನರ ಆಸನದ ಸಾಮಥ್ರ್ಯವುಳ್ಳ ಕಲಾಕ್ಷೇತ್ರ, ಕಲಾ ಪ್ರದರ್ಶನ, ದಾಸ್ತಾನು ಕೊಠಡಿ ಮುಂತಾದವುಗಳನ್ನು ಒಳಗೊಂಡಿರುತ್ತದೆ ಹಾಗೂ ಧಾರವಾಡ, ಗುಲ್ಬರ್ಗಾ, ಶಿವಮೊಗ್ಗ, ಉಡುಪಿ, ಬೆಳಗಾವಿ ಹಾಗೂ ಮಡಿಕೇರಿಯಲ್ಲಿ ಸುವರ್ಣ ಸಾಂಸ್ಕøತಿಕ ಸಮುಚ್ಚಯವನ್ನು ನಿರ್ಮಿಸಲು ನಿರ್ಧರಿಸಲಾಗಿತ್ತು. ಈ ಸಮುಚ್ಚಯಗಳು 3 ವಿಭಾಗಗಳನ್ನು ಹೊಂದಿರುತ್ತದೆ.


1. ಆಡಳಿತ ವಿಭಾಗ

2. ಗ್ರಂಥಾಲಯ ವಿಭಾಗ

3. ಆಡಿಟೋರಿಯಂ ಹಾಗೂ ಆರ್ಟ್ ಗ್ಯಾಲರಿ

1. ಬೆಂಗಳೂರು ಸುವರ್ಣ ಸಾಂಸ್ಕøತಿಕ ಸಮುಚ್ಚಯ

1. ತಳಮಹಡಿ (ಬೇಸ್‍ಮೆಂಟ್) : 440.00 ಚ.ಮೀ.ಗಳ ವಿಸ್ತೀರ್ಣ ಹೊಂದಿದ್ದು, ವಸ್ತು ಪ್ರದರ್ಶನ, ವಿವಿಧ ಕಲೆಗಳ ಪ್ರದರ್ಶನ ಹಾಗೂ ಉಗ್ರಾಣ ಹೊಂದಿರುತ್ತದೆ.

2. ನೆಲ ಮಹಡಿ : 1300.00 ಚ.ಮೀ.ಗಳ ವಿಸ್ತೀರ್ಣ ಹೊಂದಿದ್ದು, ರಂಗಮಂದಿರ (ಆಡಿಟೋರಿಯಂ 300 ಜನರಿಗೆ ಆಸನವುಳ್ಳ) ಪ್ರತ್ಯೇಕ ಪ್ರದರ್ಶನ ಕೊಠಡಿ, ಗ್ರೀನ್ ರೂಂ. ಗಂಡಸರ ಹಾಗೂ ಹೆಂಗಸರ ಶೌಚಾಲಯ ಹೊಂದಿರುತ್ತದೆ.

3. ಮೊದಲನೆ ಮಹಡಿ : 900.00 ಚ.ಮೀ.ಗಳ ವಿಸ್ತೀರ್ಣ ಹೊಂದಿದ್ದು, 10 ಜಿಲ್ಲೆಗಳಿಗಾಗಿ ಪ್ರತ್ಯೇಕ ಪ್ರದರ್ಶನಾ ಕೊಠಡಿ, ಗಂಡಸರ ಹಾಗೂ ಹೆಂಗಸರ ಶೌಚಾಲಯ ಹೊಂದಿರುತ್ತದೆ.

4. ಎರಡನೆಯ ಮಹಡಿ : 900.00 ಚ.ಮೀ.ಗಳ ವಿಸ್ತೀರ್ಣ ಹೊಂದಿದ್ದು, 19 ಜಿಲ್ಲೆಗಳಿಗಾಗಿ ಪ್ರತ್ಯೇಕ ಪ್ರದರ್ಶನಾ ಕೊಠಡಿ ಹೊಂದಿರುತ್ತದೆ.

ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿನ ಕರ್ನಾಟಕ ಕಲಾಗ್ರಾಮದಲ್ಲಿ ಸುವರ್ಣ ಸಾಂಸ್ಕøತಿಕ ಸಮುಚ್ಚಯದ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮವನ್ನು ದಿನಾಂಕ:15.06.2006ರಂದು ಮಾನ್ಯ ಮುಖ್ಯಮಂತ್ರಿಗಳು ನೆರವೇರಿಸಿದ್ದರು. ಅಲ್ಲದೆ ಸುವರ್ಣ ಸಾಂಸ್ಕøತಿಕ ಸಮುಚ್ಚಯವನ್ನು ದಿನಾಂಕ:21.03.2013ರಂದು ಮಾನ್ಯ ಇಲಾಖಾ ಸಚಿವರು ನೆರವೇರಿಸಿದರು.

2. ಧಾರವಾಡ

ಧಾರವಾಡ ಸಮುಚ್ಚಯದ ಕಾಮಗಾರಿ ಪೂರ್ಣಗೊಂಡಿದ್ದು, ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಕಚೇರಿ ಕೆಲಸಗಳು ಈಗಾಗಲೇ ನಡೆಯುತ್ತಿವೆ.

3. ಉಡುಪಿ

ಉಡುಪಿ ಸಮುಚ್ಚಯದ ಕಾಮಗಾರಿ ಪೂರ್ಣಗೊಂಡಿದ್ದು, ಸಹಾಯಕ ನಿರ್ದೇಶಕರ ಕಚೇರಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿದೆ.

4. ಗುಲ್ಬರ್ಗಾ

ಗುಲ್ಬರ್ಗಾ ಸಮುಚ್ಚಯದ ಕಾಮಗಾರಿ ಪೂರ್ಣಗೊಂಡಿದ್ದು, ಸಹಾಯಕ ನಿರ್ದೆಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಕಚೇರಿಯು ಕಾರ್ಯ ನಿರ್ವಹಿಸುತ್ತಿದೆ.

5. ಶಿವಮೊಗ್ಗ

ಶಿವಮೊಗ್ಗ ಸುವರ್ಣ ಸಾಂಸ್ಕøತಿಕ ಸಮುಚ್ಚಯವು ಎಲ್ಲಾ ಸಮುಚ್ಚಯಗಳಿಗಿಂತ ದೊಡ್ಡದಾಗಿದ್ದು, ಅದು ಆಡಳಿತ ಕಚೇರಿ, ಆಡಿಟೋರಿಯಂ, ಗ್ರಂಥಾಲಯ, ಮಾಹಿತಿ ಕೇಂದ್ರ, ಆರ್ಟ್ ಗ್ಯಾಲರಿ, ಬಯಲು ರಂಗಮಂದಿರಗಳನ್ನು ಹೊಂದಿರುತ್ತದೆ. ದಿನಾಂಕ:25.04.2010ರಂದು ಶಿವಮೊಗ್ಗ ಸಾಂಸ್ಕøತಿಕ ಸಮುಚ್ಚಯವು ಉದ್ಘಾಟನೆಯಾಗಿರುತ್ತದೆ. ಶಿವಮೊಗ್ಗ ರಂಗಾಯಣ ಘಟಕವು ಪ್ರಸಕ್ತ ಕಾರ್ಯನಿರ್ವಹಿಸುತ್ತಿದೆ.

6. ಮಡಿಕೇರಿ

2006-07ನೇ ಸಾಲಿನಲ್ಲಿ ಮಡಿಕೇರಿ ಸುವರ್ಣ ಸಾಂಸ್ಕøತಿಕ ಸಮುಚ್ಚಯವನ್ನು, ಜಿಲ್ಲಾ ರಂಗಮಂದಿರ ಸೇರಿದಂತೆ ಮಡಿಕೇರಿ ಜಿಲ್ಲಾ ಸಹಾಯಕ ನಿರ್ದೇಶಕರ ಕಚೇರಿ, ಕರ್ನಾಟಕ ಅರೆಭಾಷೆ ಸಂಸ್ಕøತಿ-ಸಾಹಿತ್ಯ ಅಕಾಡೆಮಿ ಕಚೇರಿ, ರಂಗಮಂದಿರ, ಕಲಾಗ್ಯಾಲರಿ, ಗ್ರಂಥಾಲಯ ಸೇರಿದಂತೆ ಪರಿಷ್ಕøತ ಆಡಳಿತಾತ್ಮಕ ಅನುಮೋದನೆ ನೀಡಿ ಕಾಮಗಾರಿಯನ್ನು ಆರಂಭಿಸಲು ಕ್ರಮಕೈಗೊಳ್ಳಲಾಗುತ್ತಿದೆ.

7. ಬೆಳಗಾವಿ

ಬೆಳಗಾವಿಯಲ್ಲಿ ವಿಶ್ವಕನ್ನಡ ಸಮ್ಮೇಳನ ನಡೆಯುವುದರಿಂದ ಇಲ್ಲಿಯೂ ಸಹ ಸಮುಚ್ಚಯದ ಕಾಮಗಾರಿಯು ಪೂರ್ಣಗೊಂಡಿದ್ದು, ಶ್ರೀ ಬಸವರಾಜ ಕಟ್ಟೀಮನಿ ಟ್ರಸ್ಟ್ ಪ್ರಸಕ್ತ ಕಾರ್ಯನಿರ್ವಹಿಸುತ್ತಿದೆ.