ವಿಶೇಷ ಸೂಚನೆ

ರಾಷ್ಟ್ರೀಯ ಪ್ರಶಸ್ತಿಗಳು

ರಾಷ್ಟ್ರೀಯ ಪ್ರಶಸ್ತಿಗಳು

1. ಟಿ. ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ : ಕರ್ನಾಟಕ ಮತ್ತು ಹಿಂದೂಸ್ಥಾನಿ ವಾದ್ಯ ಸಂಗೀತ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ ರಾಷ್ಟ್ರಮಟ್ಟದ ಹಿರಿಯ ಕಲಾವಿದರಿಗೆ ಈ ಉನ್ನತ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಈ ಪ್ರಶಸ್ತಿಯು ಪ್ರಶಸ್ತಿ ಪುತ್ಥಳಿ, ಫಲಕ, ಶಾಲು, ಹಾರ ಹಾಗೂ 5.00 ಲಕ್ಷ(ಐದು ಲಕ್ಷ ರೂಪಾಯಿ ಮಾತ್ರ)ಗಳ ನಗದನ್ನು ಒಳಗೊಂಡಿರುತ್ತದೆ.

2. ಬಸವ ಪುರಸ್ಕಾರ ರಾಷ್ಟ್ರೀಯ ಪ್ರಶಸ್ತಿ : ಸರ್ವಧರ್ಮ ಸಮಾನತೆಗಾಗಿ ತಮ್ಮ ತನುಮನಗಳನ್ನು ಅರ್ಪಿಸಿಕೊಂಡ ವಿಶಿಷ್ಟ ವ್ಯಕ್ತಿಗಳಿಗೆ ಹಾಗೂ ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಂಸ್ಥೆಗಳಿಗೆ ಮಹಾ ಮಾನವತಾವಾದಿ, ಸಮಾಜ ಸುಧಾರಕ, ಪರಿವರ್ತನೆಯ ಪ್ರವರ್ತಕ ಸರ್ವಸಮಾನತೆಗಾಗಿ ಹೋರಾಡಿದ ಹಾಗೂ ಶೋಷಿತ ವರ್ಗಗಳಲ್ಲಿ ಆತ್ಮ ವಿಶ್ವಾಸವನ್ನು ವರ್ಧಿಸಿದ ಜಗಜ್ಯೋತಿ ಬಸವೇಶ್ವರರ ಸಂಸ್ಮರಣಾರ್ಥ ಅವರ ಹೆಸರಿನಲ್ಲಿ ಬಸವ ಪುರಸ್ಕಾರ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಈ ಪ್ರಶಸ್ತಿಯು ಪ್ರಶಸ್ತಿ ಪುತ್ಥಳಿ, ಫಲಕ, ಶಾಲು, ಹಾರ ಹಾಗೂ 10.00ಲಕ್ಷ (ಹತ್ತು ಲಕ್ಷ ರೂಪಾಯಿ ಮಾತ್ರ)ಗಳ ನಗದನ್ನು ಒಳಗೊಂಡಿರುತ್ತದೆ.