ವಿಶೇಷ ಸೂಚನೆ

ವೀಕ್ಷಕರ ಸಂಖ್ಯೆ

455
ಇವತ್ತುಇವತ್ತು8
ಈ ವಾರಈ ವಾರ10
ಈ ತಿಂಗಳುಈ ತಿಂಗಳು43
ಇಲ್ಲಿವರೆಗೆಇಲ್ಲಿವರೆಗೆ455

ಮುಖ ಪುಟ

 

'ಕರ್ನಾಟಕ' ದಯಾಮಯಿ ಪ್ರಕೃತಿದೇವಿಯ ಅಮೂಲ್ಯ ಕೊಡುಗೆ ಅತ್ಯುತ್ತಮ ಗತವೈಭವದ ಹಾಗೂ ಸಮೃದ್ಧ ವರ್ತಮಾನದ ಅನುಪಮ ಮಿಶ್ರಣ.

ಕರ್ನಾಟಕ ಭಾರತದ ಆರನೇ ದೊಡ್ಡ ರಾಜ್ಯ. ಭಾರತದಲ್ಲೇ ಬಂಗಾರ ಸಿಗುವ ರಾಜ್ಯ ಇದೊಂದೇ. ಕರ್ನಾಟಕವು ರೇಶ್ಮೆ ಹಾಗು ಶ್ರೀಗಂಧ, ಕಾಫೀ ಹಾಗು ಏಲಕ್ಕಿ ಮುಂತಾದ ವಸ್ತುಗಳಿಗೆ ಪ್ರಸಿದ್ಧವಾಗಿದೆ. ರಮಣೀಯವಾದ ಶಿಲ್ಪಕಲೆಗೆ ಆಧಾರವಾದ ೫೭ ಅಡಿ ಎತ್ತರವಿರುವ ಜೈನ ಮುನಿ ಬಾಹುಬಲಿಯ ಮೂರ್ತಿ, ಬೇಲೂರು - ಹಳೇಬೀಡಿನ ದೇವಾಲಯ ಮತ್ತು ಬಿಜಾಪುರದ ಸ್ಮಾರಕಗಳು ಕರ್ನಾಟಕದಲ್ಲಿ ಪ್ರಸಿದ್ಧವಾಗಿದೆ.

ಭಾರತದ ಅದ್ವಿತೀಯ ಸಂಸ್ಕ್ರುತಿಗೆ ಕರ್ನಾಟಕದ ಕೊಡುಗೆ ಇತರ ಯಾವ ವಲಯಗಳಿಗೂ ಕಡಿಮೆಯೇನಿಲ್ಲ. ಅನೇಕ ಕ್ಷೇತ್ರಗಳಾದ ಸಂಗೀತ, ಧಾರ್ಮಿಕ ಹಾಗು ದರ್ಶನ ಶಾಸ್ತ್ರಗಳಲ್ಲಿ ಕರ್ನಾಟಕದ ಕೊಡುಗೆ ಪ್ರತ್ಯೇಕ ರಾಜ್ಯಗಳಿಗಿಂತ ಮಿಗಿಲಾದದ್ದು. ಕರ್ನಾಟಕವು ಶ್ರೀಮಂತ ಸಂಸ್ಕ್ರುತಿಯ ಪರಂಪರೆಯನ್ನು ಹೊಂದಿದೆ. ಜನಪದ ರಂಗವು ಅತ್ಯಂತ ಪುರಾತನ ಹಾಗೂ ಶ್ರೀಮಂತ ಸಂಪ್ರದಾಯ, ಯಕ್ಷಗಾನ ಮತ್ತು ಬೊಂಬೆಯಾಟಗಳು ಇದರ ಎರಡು ಪ್ರಮುಖ ರೂಪಗಳು. ಯಕ್ಷಗಾನವು ವಿಸ್ತಾರವಾದ ಪ್ರಸಾಧನದಲ್ಲಿ ಹಾಗು ಭರ್ಜರಿ ನೃತ್ಯದಲ್ಲಿ ಕೇರಳದಲ್ಲಿ ಪ್ರಚಲಿತದಲ್ಲಿರುವ ಕಥಕಳಿ ನೃತ್ಯಕ್ಕೆ ತೀರ ಹತ್ತಿರವಾಗಿದೆ. ಭೂತದ ಕುಣಿತ, ನಾಗಮಂಡಲ ಹಾಗು ರಾಕ್ಷಸನೃತ್ಯ ಇತ್ಯಾದಿ ಕೆಲುವು ಶಾಸ್ತ್ರವಿದಿಗಳು ದಕ್ಷಿಣ ಕನ್ನಡ ಕರಾವಳಿಗೆ ಸೀಮಿತವಾದ ಪದ್ಧತಿ.